Advertisement

ಕೇಂದ್ರ ಪ್ರಶಸ್ತಿ ಪಡೆದ ಕರ್ಣಕುಪ್ಪೆ ಗ್ರಾಪಂ ಮಾದರಿ ಕಾರ್ಯ

01:41 PM Apr 05, 2021 | Team Udayavani |

ಹುಣಸೂರು: ಸಮಗ್ರ ಅಭಿವೃದ್ಧಿಯಡೆಗೆ ದಾಪುಗಾಲು ಹಾಕಿ, ಸಾಧನೆಯಶಿಖರವನ್ನೇರಿರುವ ಹುಣಸೂರು ತಾಲೂಕುಕರ್ಣಕುಪ್ಪೆ ಗ್ರಾಮ ಪಂಚಾಯ್ತಿಯು ಕೇಂದ್ರಗ್ರಾಮೀಣಾಭಿವೃದ್ಧಿ ಸಚಿವಾಲಯ ಕೊಡಮಾಡುವ 2019-20ನೇಸಾಲಿನ ದೀನ ದಯಾಳುಉಪಾಧ್ಯಾಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಕರ್ಣಕುಪ್ಪೆ ಗ್ರಾಮ ಪಂಚಾಯ್ತಿಯು ಉದ್ಯೋಗ ಖಾತರಿಯೋಜನೆಯಡಿ ಗುರಿ ಮೀರಿದ ಸಾಧನೆ,ಬಚ್ಚಲು ಗುಂಡಿ ನಿರ್ಮಾಣದಲ್ಲಿ ಜಿಲ್ಲೆಗೆ ಪ್ರಥಮ, 14ನೇ ಹಣಕಾಸು ಯೋಜನೆಸದ್ಬಳಕೆ, ಶಾಲೆ-ಅಂಗನವಾಡಿ, ಕೆರೆ-ಕಟ್ಟೆಗಳು,ರಸ್ತೆ, ಅಭಿವೃದ್ಧಿ, ಕೃಷಿ ಕಣ ನಿರ್ಮಾಣ, ಎಲ್ಲಮನೆಗಳಿಗೂ ಶೌಚಾಲಯ, ಶೇ.100ರಷ್ಟುಎಸ್‌ಸಿ-ಎಸ್‌ಟಿ ಹಾಗೂ ದಿವ್ಯಾಂಗರ ಶೇ.5ರಸದ್ಬಳಕೆ ಸೇರಿದಂತೆ ಎಲ್ಲಾ ಯೋಜನೆಗಳಶೇ.100ರಷ್ಟು ಅನುದಾನ ಸದ್ಬಳಕೆ, ಸಮರ್ಪಕ ಕುಡಿಯುವ ನೀರು ಪೂರೈಕೆ, ಶೇ.100ರಷ್ಟು ತೆರಿಗೆ ವಸೂಲಿ, ಮಹಿಳಾ-ಮಕ್ಕಳ ಗ್ರಾಮಸಭೆ, ಕೆಡಿಪಿ ಸಭೆ, ಘನತ್ಯಾಜ್ಯ ಸಮರ್ಪಕ ನಿರ್ವಹಣೆ, ಕೋವಿಡ್‌ ಸಮರ್ಥ ನಿರ್ವಹಣೆ,ಸಂಜೀವಿನಿ ಮಹಿಳಾ ಒಕ್ಕೂಟದ ಮೂಲಕಜನಜಾಗೃತಿ, ಪಾರದರ್ಶಕ ಆಡಳಿತ,ಪಂಚಾಯ್ತಿ ಪ್ರತಿನಿಧಿಗಳು ಅಧಿಕಾರಿಗಳ ಸಮನ್ವಯತೆ-ಸಹಕಾರ, ತಾಪಂಇಒ-ಹಿರಿಯ ಅಧಿಕಾರಿಗಳ ಮಾರ್ಗದರ್ಶನ,ಪಿಡಿಒ ಬದ್ಧತೆ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಗ್ರಾಪಂಯು ಪ್ರಶಸ್ತಿ ಜೊತೆಗೆ 10 ಲಕ್ಷ ರೂ. ನಗದುಬಹುಮಾನ ತನ್ನ ಮುಡಿಗೇರಿಸಿಕೊಂಡಿದೆ.

ಗುರಿ ಮೀರಿದ ಉದ್ಯೋಗ ಖಾತರಿ: ನರೇಗಾದಡಿ 11ಸಾವಿರ ಮಾನವ ದಿನದಗುರಿ ಮೀರಿ 24,098 ಮಾನವ ಸೃಜಿಸಿ,ಸಾಮಗ್ರಿ ವೆಚ್ಚಕ್ಕಾಗಿ 30.25 ಲಕ್ಷ ರೂ. ಹಾಗೂ66.27 ಲಕ್ಷ ರೂ. ಕೂಲಿ ನೀಡಲಾಗಿದೆ. ರೈತರಜಮೀನಿನಲ್ಲಿ ಬದು ನಿರ್ಮಾಣ, 12 ಕೃಷಿಹೊಂಡ, 15 ಕೊಟ್ಟಿಗೆ ನಿರ್ಮಾಣ, ಒಂದು ಕೃಷಿ ಕಣ, ಓಡಾಡಲಾಗದ ಸ್ಥಿತಿಯಲ್ಲಿದ್ದ 4ರಸ್ತೆಗಳ ಅಭಿವೃದ್ಧಿ, 5 ಕೆರೆಗಳ ಜೀರ್ಣೋ ದ್ಧಾರ, 2 ಶಾಲೆಗಳು- 1 ಅಂಗನವಾಡಿಗಳಕಾಂಪೌಂಡ್‌ ಅಭಿವೃದ್ಧಿ, ಅಗತ್ಯವಿರುವೆಡೆಚರಂಡಿ-ಡೆಕ್‌ಗಳ ನಿರ್ಮಿಸಲಾಗಿದೆ.

620 ಬಚ್ಚಲು ಗುಂಡಿ ನಿರ್ಮಾಣ: ಗ್ರಾಪಂ ವ್ಯಾಪ್ತಿಯಲ್ಲಿ 60 ಸೋಕ್‌ ಫಿಟ್‌ (ಬಚ್ಚಲುಗುಂಡಿ) ನಿರ್ಮಾಣ ಗುರಿಗೆ ಇದೀಗ 620 ಸೋಕ್‌ಫಿಟ್‌ ನಿರ್ಮಿಸಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ಕಣಗಾಲ್‌ನಲ್ಲಿ ಕೃಷಿ ಕಣ ನಿರ್ಮಿಸಲಾಗಿದೆ.

ದ್ರವತ್ಯಾಜ್ಯ ಮುಕ್ತ ಗ್ರಾಮ: ಕಣಗಾಲಿನಅಕ್ಕಿಮಾಳ ಗ್ರಾಮದ ಎಲ್ಲ 70 ಕುಟುಂಬಗಳಿಗೂಹಾಗೂ ಹರೀನಹಳ್ಳಿಯ 148 ಬಚ್ಚಲುಗುಂಡಿ ನಿರ್ಮಿಸಿ, ಮನೆಸುತ್ತ ಹೂವಿನ ಕೈ-ತೋಟನಿರ್ಮಿಸಿಕೊಳ್ಳುವ ಮೂಲಕ ಸ್ವತ್ಛ ಹಾಗೂ ದ್ರವತ್ಯಾಜ್ಯ ಮುಕ್ತ ಗ್ರಾಮಗಳೆಸಿದ್ದರೆ, ಅಂತರ್ಜಲವೃದ್ಧಿಸಲು ನೆರವಾಗಿದೆ. ಗ್ರಾಮಗಳಲ್ಲಿ ಚರಂಡಿ ನೀರು ನಿರ್ವಹಣೆಗೆ ನಡೆಯುತ್ತಿದೆ.

Advertisement

ಘನತ್ಯಾಜ್ಯ ಘಟಕಕ್ಕೂ ಆದ್ಯತೆ: ಮನೆ-ಮನೆ ಕಸ ಸಂಗ್ರಹಣೆ ಮಾಡುವ ತ್ಯಾಜ್ಯವನ್ನುಆಯಾ ಗ್ರಾಮಗಳಲ್ಲಿ ಶೇಖರಣೆ-ವಿಂಗಡಣೆಮಾಡುವ ಮೂಲಕ ಸ್ವಚ್ಛತೆ ಕಾಪಾಡಲಾಗುತ್ತಿದೆ. ಕಣಗಾಲಿನಲ್ಲಿ 1.16 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ದೊಡ್ಡ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಗ್ರಾಮ ವಿಕಾಸಕ್ಕೂ ನೀಲನಕ್ಷೆ: ಗ್ರಾಪಂ ವ್ಯಾಪ್ತಿಯಲ್ಲಿ 22 ಕೆರೆಗಳನ್ನುಜೀರ್ಣೋದ್ಧಾರಗೊಳಿಸುವ, ನೀರು ಹರಿದು ಬರುವ ಕಾಲುವೆ ಪುನಶ್ಚೇತನಗೊಳಿಸುವುದು,ಕೆರೆಗಳ ಏರಿ ದುರಸ್ತಿ, ಡಿಜಿಟಲ್‌ ಗ್ರಂಥಾಲಯನಿರ್ಮಾಣ, ನರೇಗಾದಡಿ ರೈತರ ಪ್ರಗತಿಗಾಗಿಶೇ.60ರಷ್ಟು ಹೆಚ್ಚು ಅನುದಾನ ಯೋಜನೆರೂಪಿಸಿದೆ. ಒಟ್ಟಾರೆ ಸಮಗ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ರೂಪಿಸಿದೆ.

ಹಿಡಿದ ಕೆಲಸ ಬಿಡದ ಪಿಡಿಒ ರಾಮಣ್ಣ :

ಗ್ರಾಪಂ ಸಮಗ್ರ ಅಭಿವೃದ್ಧಿಯಲ್ಲಿ ಪಿಡಿಒ ರಾಮಣ್ಣರ ಪಾತ್ರ ಅಪಾರ. ಇವರು ಹಿಡಿದ ಕೆಲಸವನ್ನು ಬದ್ಧತೆಯಿಂದ ಅನುಷ್ಠಾನಗೊಳಿಸುವಅಧಿಕಾರಿ. ಬಿಳಿಗೆರೆ ಗ್ರಾಪಂನಲ್ಲಿ ಪಿಡಿಒ ಆಗಿದ್ದಾಗ ಕೇವಲ15ದಿನಗಳಲ್ಲಿ 196 ಶೌಚಾಲಯ ನಿರ್ಮಿಸಿ ಒಮ್ಮೆಲೆ ಉದ್ಘಾಟಿಸಿನಿರ್ಮಲ ಗ್ರಾಪಂ ಪುರಸ್ಕಾರಕ್ಕೆ ಭಾಜನರಾಗಿದ್ದಲ್ಲದೆ ಪ್ರಧಾನಿಯವರ ಮನ್‌ ಕೀ ಬಾತ್‌ ನಲ್ಲಿ ಇಡೀ ದೇಶದ ಗಮನ ಸೆಳೆದಿದ್ದರು. ಜೊತೆಗೆಅವರು ಕಾರ್ಯನಿರ್ವಹಿಸಿದ ನೇರಳಕುಪ್ಪೆ, ಹನಗೋಡು,ಉಯಿಗೊಂಡನಹಳ್ಳಿ, ಕಟ್ಟೇಮಳಲವಾಡಿ ಗ್ರಾಪಂಗಳಲ್ಲೂ ಉತ್ತಮ ಸಾಧನೆಗೈದಿದ್ದು, ಕರ್ಣಕುಪ್ಪೆ ಗ್ರಾಪಂ ಈ ಬಾರಿಯ ಪ್ರಶಸ್ತಿಗೆ ಭಾಜನವಾಗಲು ಕಾರಣರಾಗಿದ್ದಾರೆ.

ಗ್ರಾಪಂನ ಎಲ್ಲರ ಸಹಕಾರ, ಶಾಸಕರಸಹಕಾರ, ಇಒ ಮಾರ್ಗದರ್ಶನದಿಂದಗ್ರಾಪಂಗೆ ಪ್ರಶಸ್ತಿ ಲಭಿಸಿದೆ. ಹಿರಿಯ ಅಧಿಕಾರಿಗಳಮಾರ್ಗದರ್ಶನ ಪಡೆದು ಮುಂದೆ ಮತ್ತಷ್ಟುಅಭಿವೃದ್ಧಿಗೊಳಿಸಿ, ಜನರ ಸ್ವಾವಂಬಿ ಬದುಕಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಶ್ರಮಿಸುವೆ.  -ರಾಮಣ್ಣ, ಕರ್ಣಕುಪ್ಪೆ ಪಿಡಿಒ

ಮುಂದೆ ಮತ್ತಷ್ಟು ಪಂಚಾಯಿತಿಗಳು ಪ್ರಶಸ್ತಿಪಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ನರೇಗಾ ಅನುಷ್ಠಾನದಲ್ಲಿ ಜಿಲ್ಲೆಗೆ ಪ್ರಥಮಸ್ಥಾನಗಳಿಸಲು ಶಾಸಕ ಮಂಜುನಾಥ್‌ ಸೇರಿದಂತೆಎಲ್ಲಾ ಪ್ರತಿನಿಧಿಗಳ ಸಹಕಾರ ಇದೆ. ಪ್ರಶಸ್ತಿಪಡೆದಿರುವ ಕರ್ಣಕುಪ್ಪೆ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಭಿನಂದಿಸುವೆ.  -ಎಚ್‌.ಡಿ.ಗಿರೀಶ್‌, ತಾಪಂ ಇಒ

ನಮ್ಮ ಗ್ರಾಪಂಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಎಲ್ಲರ ಸಹಕಾರಅದರಲ್ಲೂ ಪಿಡಿಒ ರಾಮಣ್ಣರ ಕಾಯಕ ನಿಷ್ಠೆ,ಜನರ ಸಹಕಾರ ಉತ್ತಮವಾಗಿತ್ತು. ಮುಂದೆಯೂ ಉತ್ತಮ ಕಾರ್ಯ ನಡೆಸುತ್ತೇವೆ. -ಪಾಪಣ್ಣ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ

ಹಿಂದಿನ ಆಡಳಿತ ಮಂಡಳಿಯ ಸಮರ್ಥಆಡಳಿತದಿಂದ ಪ್ರಶಸ್ತಿ ಲಭಿಸಿದ್ದು,ಮುಂದೆಯು ಇವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರಿಯುತ್ತೇವೆ. – ಸರಸ್ವತಿ, ಅಧ್ಯಕ್ಷರು, ಕುಮಾರಸ್ವಾಮಿ, ಉಪಾಧ್ಯಕ್ಷ

 

– ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next