Advertisement
ಒಟ್ಟಾರೆ ದೇಶೀಯ ಉತ್ಪಾದನೆಗೆ (ಜಿಡಿಪಿ) ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬರುತ್ತಿರುವ ದೇಣಿಗೆಯನ್ನು ಗಣನೀಯವಾಗಿ ಹೆಚ್ಚಿಸಲು, ಆ ಕ್ಷೇತ್ರದಲ್ಲಿ ತ್ವರಿತ ನಿರ್ಧಾರ, ತ್ವರಿತ ಅನುಷ್ಠಾನ, ಪರಿಣಾಮಕಾರಿ ಆಡಳಿತವನ್ನು ನೀಡುವುದು ಹಾಗೂ ಹೊಸ ಸ್ಟಾರ್ಟ್ ಅಪ್ ಗಳ ಬೆಳವಣಿಗೆಗಳಿಗೆ ಮತ್ತಷ್ಟು ಪೂರಕವಾದ ವಾತಾವರಣವನ್ನು ಒದಗಿಸಲು ತೀರ್ಮಾನಿಸಲಾಗಿದೆ.
Related Articles
Advertisement
“ಕರ್ಮಯೋಗಿ’ಗೆ ಮತ್ತಷ್ಟು ಒತ್ತು:ಜಿಐಎಸ್ ಆಧಾರಿತ ಯೋಜನೆ ಮತ್ತು ಅನುಷ್ಠಾನ ಪದ್ಧತಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕೆಲಸವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಕರ್ಮಯೋಗಿ ಯೋಜನೆಯಡಿಯ ಒಂದು ಭಾಗವಾಗಿಯೇ ಇದನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಮಿತ್ರುಭೂಮಿ ಮೂಲಕ ಡಿಜಿಟೈಸೇಷನ್:
2023ರೊಳಗೆ ಎಲ್ಲಾ ಭೂದಾಖಲೆಗಳನ್ನು ಡಿಜಿಟೈಸ್ಡ್ ತಂತ್ರಜ್ಞಾನದ ಮೂಲಕ ಲಭ್ಯವಾಗುವಂತೆ ಮಾಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಪ್ರತಿಯೊಂದು ಹೊಲಕ್ಕೆ ಅಥವಾ ಮನೆಯ ನಿವೇಶನಕ್ಕೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಇದರ ಜೊತೆಯಲ್ಲೇ, ಕಂದಾಯ ಇಲಾಖೆಯ ಅಡಿಯಲ್ಲಿ ದಾಖಲಾಗುವ ಎಲ್ಲಾ ರೀತಿಯ ಭೂ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಇ-ಕೋರ್ಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಈ ಮೂಲಕ, ಭೂದಾಖಲೆಗಳು, ವ್ಯಾಜ್ಯಗಳ ಇತ್ಯರ್ಥ ವ್ಯವಸ್ಥೆಗಳಿಗೆ ಪಾರದರ್ಶಕತೆ ಕೊಡಲು ನಿರ್ಧರಿಸಲಾಗಿದೆ. ಹಂತಹಂತವಾಗಿ ಜಾರಿ
ಸೆ. 18ರಂದು ಪ್ರಧಾನಿ ನೇತೃತ್ವದಲ್ಲಿ ಹಲವಾರು ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ದೇಶದ ನಾಗರಿಕರಿಗೆ ಅವರಿಗೆ ಬೇಕಾದ ಮೂಲದಾಖಲೆಗಳನ್ನು ಒಂದೇ ವ್ಯವಸ್ಥೆಯಡಿ ಕಲ್ಪಿಸುವ ಮಹತ್ವದ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರೂಪುರೇಷೆಗಳನ್ನು ಚರ್ಚಿಸಿದ್ದರು. ಅದೇ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವಾರು ಹೊಸ ಆಲೋಚನೆಗಳುಳ್ಳ ಯೋಜನೆಗಳ ಬಗ್ಗೆ ಚರ್ಚಿಸಲಾಗಿತ್ತು. ಆಗ ರೂಪುಗೊಂಡಿರುವ ಹೊಸ ವ್ಯವಸ್ಥೆಗಳು, ಹೊಸ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.