Advertisement

Budget ಕೇಂದ್ರ Vs ವಿಪಕ್ಷ ಬಜೆಟಾಪಟಿ; ಸಂಸತ್‌ನ ಒಳಗೂ ಹೊರಗೂ ಐಎನ್‌ಡಿಐಎ ಮಿತ್ರಕೂಟ ಹೋರಾಟ

01:17 AM Jul 25, 2024 | Team Udayavani |

ಹೊಸದಿಲ್ಲಿ: ವಿಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಸದಸ್ಯರು ಸಂಸತ್ತಿನ ಒಳಗೂ ಹೊರಗೂ ಬುಧವಾರ ಪ್ರತಿಭಟನೆ ನಡೆಸಿದರು. ಎನ್‌ಡಿಎ ಮಿತ್ರಪಕ್ಷಗಳ ಆಡಳಿತವಿರುವ ಆಂಧ್ರಪ್ರದೇಶ, ಬಿಹಾರಗಳಿಗೆ ಗರಿಷ್ಠ ಆದ್ಯತೆ ನೀಡಿ ಉಳಿದ ರಾಜ್ಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

Advertisement

“ಕುರ್ಚಿ ಉಳಿಸಿಕೊಳ್ಳುವ ಬಜೆಟ್‌’ ಎಂದು ಆರೋಪಿಸಿದ ವಿಪಕ್ಷಗಳ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿ, ಪ್ರತಿಭಟನೆ ಮಾಡಿದರು. ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬಜೆಟ್‌ನಲ್ಲಿ ಎಲ್ಲ ರಾಜ್ಯಗಳ ಹೆಸರಲು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಬುಧವಾರ ಲೋಕಸಭೆ ಆರಂಭವಾಗುತ್ತಿದ್ದಂತೆ ಬಜೆಟ್‌ ಹಂಚಿಕೆ ವಿಷಯವನ್ನು ಪ್ರಸ್ತಾವಿಸಲು ವಿಪಕ್ಷಗಳ ಸದಸ್ಯರು ಮುಂದಾದರು. ಶೂನ್ಯ ವೇಳೆ ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎಂದು ಸ್ಪೀಕರ್‌ ಓಂ ಬಿರ್ಲಾ ಎಚ್ಚರಿಸಿದರು. ವಿಷಯ ಪ್ರಸ್ತಾವಿಸಲು ಸ್ಪೀಕರ್‌ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ, ಸದಸ್ಯರು ಸಭಾತ್ಯಾಗ ಮಾಡಿದರು.

ರಾಜ್ಯಸಭೆಯಲ್ಲೂ ಸಭಾತ್ಯಾಗ
ಇತ್ತ ರಾಜ್ಯಸಭೆಯಲ್ಲೂ ವಿಪಕ್ಷಗಳು ಬಜೆಟ್‌ ತಾರತಮ್ಯ ವಿರೋಧಿಸಿ ಪ್ರತಿಭಟನೆ ನಡೆಸಿದವು. ಬಜೆಟ್‌ನಲ್ಲಿ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಿಗೆ ತಾರತಮ್ಯ ಎಸಗಲಾಗಿದೆ. ರಾಜ್ಯ ಗಳ ನಡುವೆ ಅಸಮತೋಲನವಾದರೆ ದೇಶದ
ಪ್ರಗತಿ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ನಿರ್ಮಲಾ ಸೀತಾರಾಮನ್‌ ಉತ್ತರದ ವೇಳೆ, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಸಂಸತ್‌ ಭವನದ ಹೊರಭಾಗದಲ್ಲಿ ಕೂಡ ಐಎನ್‌ಡಿಐಎ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ‌ಗಳ ವಾದವೇನು?
-ಕೇಂದ್ರ ಸರಕಾರದಿಂದ ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ ಮಂಡನೆ
-ವಿಪಕ್ಷ ಆಡಳಿತವಿರುವ, ಮೋದಿಯನ್ನು ತಿರಸ್ಕರಿಸಿದ ರಾಜ್ಯಗಳಿಗೆ ಅನ್ಯಾಯ
-ರಾಜ್ಯ-ರಾಜ್ಯಗಳ ನಡುವೆ ಅಸಮತೋಲನವಾದರೆ ಪ್ರಗತಿ ಸಾಧ್ಯವಿಲ್ಲ
-ಎಲ್ಲ ರಾಜ್ಯಗಳ ತಟ್ಟೆ ಖಾಲಿ, 2 ರಾಜ್ಯಗಳ ತಟ್ಟೆಯಲ್ಲಿ ಜಿಲೇಬಿ, ಪಕೋಡಾ!

Advertisement

ಸರಕಾರದ ಸಮರ್ಥನೆಯೇನು?
-ಬಜೆಟ್‌ನಲ್ಲಿ ಎಲ್ಲ ರಾಜ್ಯಗಳ ಹೆಸರು ಪ್ರಸ್ತಾವ ಮಾಡಲು ಸಾಧ್ಯವಿಲ್ಲ
-ಈ ಹಿಂದೆ ಕಾಂಗ್ರೆಸ್‌ ಎಲ್ಲ ಬಜೆಟ್‌ನಲ್ಲೂ ಎಲ್ಲ ರಾಜ್ಯಗಳ ಪ್ರಸ್ತಾವ ಮಾಡಿತ್ತೇ?
-ರಾಜ್ಯಗಳ ಹೆಸರು ಹೇಳಿಲ್ಲ ಎಂದ ಮಾತ್ರಕ್ಕೆ ಅಭಿವೃದ್ಧಿಗೆ ಪರಿಗಣಿಸಿಲ್ಲ ಎಂದಲ್ಲ
-ಕೇಂದ್ರ ಯೋಜನೆ, ಕಾರ್ಯಕ್ರಮ, ಹಣ ಕಾಸು ನೆರವು ಎಲ್ಲ ರಾಜ್ಯಗಳಿಗೂ ಲಭ್ಯ
-ರಾಜಕೀಯ ವಿರೋಧಕ್ಕಾಗಿ ಆರೋಪ ಮಾಡುವುದು ಸರಿಯಲ್ಲ

Advertisement

Udayavani is now on Telegram. Click here to join our channel and stay updated with the latest news.

Next