Advertisement

ಆಯುಷ್ಮಾನ್ – ಆರೋಗ್ಯ ಕರ್ನಾಟಕ ಯೋಜನೆಗೆ ಕೇಂದ್ರ ಹೆಚ್ಚಿನ ನೆರವು ನೀಡಲಿ: ದಿನೇಶ್ ಗುಂಡೂರಾವ್

07:30 PM Jul 15, 2023 | Team Udayavani |

ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ವಿಮೆ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ಅನುದಾನ ನೀಡಬೇಕು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಡೆಹ್ರಾಡೂನ್ ಸ್ವಾಸ್ಥ್ಯ ಚಿಂತನ ಶಿಬಿರದಲ್ಲಿ ಪಾಲ್ಗೊಂಡಿರುವ ಸಚಿವರು, ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರದಿಂದ ಹೆಚ್ಚಿನ ನೆರವಿನ ಅಗತ್ಯತೆಯ ಕುರಿತು ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದರು.

ABPMJAY ಸ್ಕೀಮ್ ನಲ್ಲಿ ಕರ್ನಾಟಕವು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಅದರೂ ಆಯುಷ್ಮಾನ್ ಯೋಜನೆಯಡಿ ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ  ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಹಣಕಾಸಿನ ನೆರವು ದೊರೆಯುತ್ತಿಲ್ಲ ಎಂದು ಸಚಿವ ಗುಂಡೂರಾವ್ ಅವರು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಿವರಿಸಿದರು.

ಪ್ರಸ್ತುತ ರಾಜ್ಯ ಸರ್ಕಾರ ಶೇ 64 ರಷ್ಟು ಹಣಕಾಸಿನ ನೆರವು ನೀಡುತ್ತಿದ್ದು, ಕೇಂದ್ರ ಸರ್ಕಾರ ಶೇ 36 ರಷ್ಟು ಮಾತ್ರ ಅನುದಾನ ಒದಗಿಸುತ್ತಿದೆ. ಶೇ 64 ರಷ್ಟು ಹಣಕಾಸನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ಹಣಕಾಸಿನ ನೆರವು ನೀಡದರೆ ಪರಿಣಾಮಕಾರಿಯಾಗಿ ಹೆಚ್ಚಿನ ಜನರಿಗೆ ಯೋಜನೆಯನ್ನ ತಲುಪಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೇ 60 ರಾಜ್ಯ ಸರ್ಕಾರ ಶೇ 40 ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Advertisement

ಸಾರ್ವಜನಿಕರ ಆರೋಗ್ಯ ಭದ್ರತೆ ದೃಷ್ಟಿಕೋನದಲ್ಲಿ ಆರಂಭ ಆಗಿರುವ ಆಯುಷ್ಮಾನ್ ಭಾರತ್ ಮಹತ್ವದ ಯೋಜನೆಗೆ ಈ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳುವಂತೆ ಸಚಿವರು ಮನವಿ ಮಾಡಿದರು. ಸ್ವಾಸ್ಥ್ಯ ಚಿಂತನ ಶಿಬಿರದ ಎರಡನೇ ದಿನವಾದ ಇಂದು ಆಯುಷ್ಮಾನ್ ಭವ ವಿಚಾರ ಸಂಕಿರಣದಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೋ ಚೇರ್ಮೆನ್ ಆಗಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next