Advertisement

ವಿಟಿಯುನಿಂದ ಸೆಂಟರ್ ಆಫ್‌ ಎಕ್ಸಲೆನ್ಸ್: ನಿರ್ದೇಶಕ ಗಾದಗಿ

11:10 AM Apr 03, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ಹೆಚ್ಚಳದ ಜತೆಗೇ ಉದ್ಯೋಗ ಕುರಿತಾದ ತರಬೇತಿ ಹಾಗೂ ಉದ್ಯೋಗ ದೊರಕುವಂತಾಗಲು ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.‌ಬಸವರಾಜ ಗಾದಗಿ ಹೇಳಿದರು.

Advertisement

ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ನಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ವಿವಿಯ ರ್ಯಾಂಕ್ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸೆಂಟರ್ ಆಫ್ ಎಕ್ಸಲೆನ್ಸ್ ದಿಂದ ಸ್ಥಳದಲ್ಲೇ ಈ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ- ದೊಡ್ಡ ಕಂಪನಿಗಳಲ್ಲಿ ನೌಕರಿ ದೊರಕಲು ಅನುಕೂಲವಾಗುತ್ತದೆ.‌ ಒಟ್ಟಾರೆ ಸೆಂಟರ್ ಆಪ್ ಎಕ್ಸಲೆನ್ಸ್ ದಿಂದ ತರಬೇತಿ ಜತೆಗೆ ನೌಕರಿ ಸಿಗಲಿದೆ

‌ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ. ವಿದ್ಯಾಶಂಕರ ಅವರು ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೆ ಆಗಮಿಸಿ ಈ ಕುರಿತು ಪರಿಶೀಲಿಸಿ ಚಾಲನೆ ನೀಡುವರು ಎಂದು ಗಾದಗಿ ವಿವರಣೆ ನೀಡಿದರು.

ರಾಜ್ಯದ 225 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಮ್ಮ ವಿಟಿಯು ಪ್ರಾದೇಶಿಕ ಕೇಂದ್ರ ಟಾಪ್ 10 ರೊಳಗಿನ‌ ಸಾಧನೆ ಮಾಡಿದೆ.‌ ಅದಲ್ಲದೇ ನಾಲ್ಕು ಪ್ರಾದೇಶಿಕ ಕೇಂದ್ರಗಳಲ್ಲಿ 9 ರ್ಯಾಂಕ್ ಗಳು ತಮ್ಮ ಕೇಂದ್ರಕ್ಕೆ ಬಂದಿವೆ ಎಂದು ಗಾದಗಿ ತಿಳಿಸಿದರು.

Advertisement

ವಿಟಿಯು ಮಹಿಳಾ ಶಿಕ್ಷಣ ಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶೇ.65 ರಷ್ಟು ವಿದ್ಯಾರ್ಥಿನಿಯರೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ಜತೆಗೆ ಲ್ಯಾಪ್‌ಟಾಪ್, ಪ್ರೊಜೆಕ್ಟ್ ಗೆಂದು ಐದು ಸಾವಿರ ರೂ ಪ್ರೋತ್ಸಾಹ ಧನ ಸೇರಿ ಇತರ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ನಿರ್ದೇಶಕ ಪ್ರೊ.‌ಗಾದಗಿ ಹೇಳಿದರು.

ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.‌ಜಗನ್ನಾಥ ಬಿಜಾಪುರ ‌ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ರ್ಯಾಂಕ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.‌

ನಂತರ ಮಾತನಾಡಿದ ಡಾ. ಬಿಜಾಪುರ, ಎಚ್ಕೆಇ ಸಂಸ್ಥೆ ಸೆಂಟರ್ ಆಫ್ ಎಕ್ಸಲೆನ್ಸ್ ಈಚೆಗೆ ತೆರೆಯಲಾಗಿದೆ. ಈಗ ವಿಟಿಯುನಲ್ಲಿ ಆಗುತ್ತಿರುವುದು ಸಂತಸ ತಂದಿದೆ ಎಂದರು.

ಎಚ್ಕೆಇ ಆಡಳಿತ ಮಂಡಳಿ ಸದಸ್ಯರಾದ ಅನೀಲ ಪಟ್ಟ,ಡಾ.‌ರಾಜಶೇಖರ ಪಾಟೀಲ್ ಸೇರಿದಂತೆ ಮುಂತಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next