Advertisement

ಬರಲಿದೆ ದೈತ್ಯ ಸೌರವಿದ್ಯುದಾಗಾರ; ರಾಜಸ್ಥಾನದ ಫ‌ತೇಗಡದಲ್ಲಿ ನಿರ್ಮಿಸುವ ಉದ್ದೇಶ

11:46 PM Apr 17, 2022 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ, ಸೌರಶಕ್ತಿ ಹಾಗೂ ಬ್ಯಾಟರಿ ಆಧಾರಿತ ಬೃಹತ್‌ ವಿದ್ಯುತ್‌ ಸಂಗ್ರಹಾಗಾರ ನಿರ್ಮಿಸಲು ಕೇಂದ್ರ ಮುಂದಾಗಿದೆ.

Advertisement

ರಾಜಸ್ಥಾನದ ಅಂತರರಾಜ್ಯ ವಿದ್ಯುತ್‌ ಸರಬರಾಜು ಕೇಂದ್ರವಿರುವ “ಫ‌ತೇಗಡ-3 ಸಬ್‌ ಸ್ಟೇಷನ್‌’ ವ್ಯಾಪ್ತಿಯಲ್ಲೇ ಈ ಸಂಗ್ರಹಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ.

ಇದು, ಇಯಾನ್‌ ಬ್ಯಾಟರಿ ಆಧಾರಿತ ಸಂಗ್ರಹಾಗಾರವಾಗಿರಲಿದೆ. ವಿದ್ಯುತ್‌ ಸರಬರಾಜು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾನಾ ಕಂಪನಿಗಳ ಸಹಭಾಗಿತ್ವದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 2,000 ಕೋಟಿ ರೂ. ಹೂಡಿಕೆಯನ್ನು ಕೇಂದ್ರ ನಿರೀಕ್ಷಿಸುತ್ತಿದೆ. ಈ ಬಗ್ಗೆಭಾರತೀಯ ಸೌರಶಕ್ತಿ ಕಾರ್ಪೊರೇಷನ್‌ (ಎಸ್‌ಇಸಿಐ) ಟೆಂಡರ್‌ ಆಹ್ವಾನಿಸಿದೆ.

ಉದ್ದೇಶಗಳೇನು?
1. ದೇಶದ ನಾನಾ ರಾಜ್ಯಗಳ ವಿದ್ಯುತ್‌ ವಿತರಣಾ ಕಂಪನಿಗಳು (ಡಿಸ್ಕಾಂ)ಗಳು ಹಾಗೂ ವಿದ್ಯುತ್‌ ಸರಬರಾಜು ಕಂಪನಿಗಳು ತುರ್ತು ಸಂದರ್ಭಗಳಲ್ಲಿ ಬೇಕಾಗುವ ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನು ಪಡೆದುಕೊಳ್ಳುವಂತೆ ಮಾಡುವುದು.
2. ಪುನರ್‌ ನವೀಕರಿಸಬಹುದಾದ ಇಂಧನದ ಮಾದರಿಯಲ್ಲಿ ಒಟ್ಟು 4 ಸಾವಿರ ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಕೇಂದ್ರವನ್ನು ನಿರ್ಮಿಸಿ, ಅದರಲ್ಲಿನ ವಿದ್ಯುತ್ತನ್ನು ರಾಷ್ಟ್ರೀಯ ವಿದ್ಯುತ್‌ ಸರಬರಾಜು ಗ್ರಿಡ್‌ಗೆ ಬಳಸಿಕೊಳ್ಳುವಂತೆ ಮಾಡುವುದು.

ಸರ್ಕಾರದಿಂದ ಸಿಗುವ ಸಹಾಯವೇನು?
ಇದು ಸ್ವಂತ ಖರ್ಚಿನಲ್ಲಿ ನಿರ್ಮಿಸಿ ನಿರ್ವಹಿಸುವಂಥ (build-own-operate) ವ್ಯವಸ್ಥೆ. ಇದಕ್ಕೆ ಬೇಕಾದ ಭೂಮಿ, ಪರವಾನಗಿ, ಇನ್ನಿತರ ಪ್ರಮಾಣಪತ್ರಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ.

Advertisement

ವಿದ್ಯುತ್‌ ಹಂಚಿಕೆ ಹೇಗೆ?:
ಮಾದರಿಯ ನಿರ್ವಹಣಾ ವ್ಯವಸ್ಥೆ. ಈ ಕಂಪನಿಯಲ್ಲಿ ಎರಡು ರೀತಿಯ ಪವರ್‌ ಸ್ಟೋರೇಜ್‌ ಸೌಲಭ್ಯಗಳಿವೆ. ಪ್ರತಿ ಎರಡು ಗಂಟೆಗೆ 500 ಮೆಗಾ ವ್ಯಾಟ್‌ ಸರಬರಾಜು ಮಾಡುವ ಒಂದು ಸೌಲಭ್ಯವಾದರೆ, ಮತ್ತೂಂದರಲ್ಲಿ ಒಂದು ಗಂಟೆಗೆ ಸಾವಿರ ಮೆ.ವ್ಯಾ. ವಿದ್ಯುತ್ತನ್ನು ಸರಬರಾಜು ಮಾಡುವ ಮತ್ತೊಂದು ಸೌಲಭ್ಯವಿದೆ. ರಾಜ್ಯಗಳ ವಿದ್ಯುತ್‌ ವಿತರಣಾ ಕಂಪನಿಗಳು, ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಎಸ್‌ಇಸಿಐ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.ಒಪ್ಪಂದಕ್ಕನುಗುಣವಾಗಿ, ಈ ಯೋಜನೆಯಡಿ ಭೂಮಿ ಖರೀದಿಸಿ ಸಂಗ್ರಹಾಗಾರ ನಿರ್ಮಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next