Advertisement

ಹೊಗೆ ಮುಕ್ತ ಬಡವರ ಮನೆಗೆ ಕೇಂದ್ರ ಸಂಕಲ್ಪ

12:14 PM Jul 14, 2017 | |

ಕುಂದಗೋಳ: ಬಡವರ ಮನೆಯೂ ಹೊಗೆ ಮುಕ್ತವಾಗಬೇಕೆಂಬುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದ್ದು, ಮೂರು ವರ್ಷದ ಆಡಳಿತದಲ್ಲಿ ಬಡವರಿಗೆ ಮೂರು ಕೋಟಿ ಅಡುಗೆ ಅನಿಲವನ್ನು ವಿತರಿಸಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. 

Advertisement

ಪಟ್ಟಣದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಉಜ್ವಲ ಯೋಜನೆಗೆ ಚಾಲನೆ ಮತ್ತು ಫಲಾನುಭವಿಗಳಿಗೆ ಉಚಿತ ಸಿಲಿಂಡರ್‌ ವಿತರಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಿದ್ದರೂ ಶ್ರೀಸಾಮಾನ್ಯರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ.

ಕಾಂಗ್ರೆಸ್‌ನ ಆಡಳಿತದ ಅವಧಿಯಲ್ಲಿ 7 ಕೋಟಿ ಸಿಲಿಂಡರ್‌ ಗಳನ್ನು ಮೇಲವರ್ಗದವರಿಗೆ ವಿತರಿಸಿದರೆ, ಮೋದಿ ಸರ್ಕಾರ ಮೂರು ವರ್ಷದಲ್ಲಿ 6.50 ಕೋಟಿ ಸಿಲಿಂಡರ್‌ ವಿತರಿಸಿದೆ ಎಂದರು. 2010-11ರ ಜನಗಣತಿ ಆಧಾರದ ಮೇಲೆ ಬಡವರಿಗೆ ಸಿಲಿಂಡರ್‌ ವಿತರಿಸಲಾಗುತ್ತಿದ್ದು, ಇನ್ನೂಳಿದ ಬಡ ಫಲಾನುಭವಿಗಳಿಗೆ ಆಗಸ್ಟ್‌ ತಿಂಗಳದಲ್ಲಿ ಉಜ್ವಲ ಪ್ಲಸ್‌ ಯೋಜನೆ ಮೂಲಕ ಎಲ್ಲ ಬಡವರಿಗೆ ಸಿಲಿಂಡರ್‌ ವಿತರಿಸುವ ಭರವಸೆ ನೀಡಿದರು. 

ಬಿಜೆಪಿಯ ಮಾಜಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಎಂ.ಆರ್‌. ಪಾಟೀಲ ಮಾತನಾಡಿ, ಕೇಂದ್ರದ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಂಸದ ಪ್ರಹ್ಲಾದ ಜೋಶಿಯವರು ಉಜ್ವಲ ಯೋಜನೆಯಡಿ ಕುಂದಗೋಳ ಮತಕ್ಷೇತ್ರಕ್ಕೆ 12 ಸಾವಿರಕ್ಕೂ ಹೆಚ್ಚು ಬಡವರಿಗೆ ಸಿಲಿಂಡರ್‌ ವಿತರಿಸುವಲ್ಲಿ ಶ್ರಮಿಸಿದ್ದಾರೆ.

ರಾಜ್ಯ ಸರ್ಕಾರ ಒಂದೊಂದು ವರ್ಗಕ್ಕೆ ಒಂದೊಂದು ಯೋಜನೆ ನೀಡುತ್ತಾ ಜಾತಿಯ ಲೆಕ್ಕಾಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಮತ್ತು ಎಚ್‌.ಪಿ. ಕಂಪನಿ ಅಧಿಕಾರಿ ರೆಡ್ಡೇರ ಮಾತನಾಡಿದರು.

Advertisement

ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಜಿಪಂ ಸದಸ್ಯರಾದ ಎನ್‌.ಎನ್‌. ಪಾಟೀಲ, ಭರಮಣ್ಣ ಮುಗಳಿ, ತಾಪಂ ಅಧ್ಯಕ್ಷೆ ರೇಣುಕಾ ಅಂಗಡಿ, ಬಿಜೆಪಿ ತಾಲೂಕಾಧ್ಯಕ್ಷ ಮಾಲತೇಶ ಶ್ಯಾಗೋಟಿ, ಮುಖಂಡರಾದ ಬಸವರಾಜ ಕುಂದಗೋಳಮಠ, ಈಶ್ವರಪ್ಪ ಗಂಗಾಯಿ, ಮಲ್ಲೇಶಪ್ಪ ಕೊಪ್ಪದ, ಹಿಂದೂಸ್ಥಾನ ಪೆಟ್ರೋಲಿಯಂ ಅ ಧಿಕಾರಿಗಳಾದ ವಿಷ್ಣುವರ್ಧನ ರೆಡ್ಡಿ, ಪ್ರಫುಲ ಕುಲಕರ್ಣಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next