Advertisement
ಮಹಾರಾಷ್ಟ್ರ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಎಲೈಟ್ ಗ್ರೂಪ್ “ಸಿ’ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಮಲ್ ಕನ್ಯಾಲ್ 101 ರನ್ ಬಾರಿಸಿ ಸಂಭ್ರಮಿಸಿದರು. ಕ್ಯಾನ್ಸರ್ ಮಾರಿಯನ್ನು ದೂರಕ್ಕೆ ಓಡಿಸಿ ತನ್ನ ಉತ್ಕಟ ಕ್ರಿಕೆಟ್ ಪ್ರೀತಿಯನ್ನು ಅನಾವರಣಗೊಳಿಸಿದ ಕನ್ಯಾಲ್ ಸಾಧನೆ ನಿಜಕ್ಕೂ ಅಸಾಮಾನ್ಯ.
Related Articles
ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಗಿದ್ದ ಕಮಲ್ ಕನ್ಯಾಲ್ ಅಂಡರ್-14, ಅಂಡರ್-16 ಸಂಭಾವ್ಯ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ. ಆಗ ಕ್ಯಾನ್ಸರ್ ದಾಳಿ ಮಾಡಿತ್ತು.
ಇವರ ಕುಟುಂಬ ನೈನಿತಾಲ್‌ನ ಹಲ್ªವಾನಿ ಗ್ರಾಮದಲ್ಲಿ ವಾಸಿಸುತ್ತಿತ್ತು. ರಕ್ತ ತಪಾಸಣೆಗೆಂದು ತಂದೆ ಉಮೇಶ್ ಅವರು ಕಮಲ್‌ನನ್ನು ವೈದ್ಯರಲ್ಲಿ ಕರೆದುಕೊಂಡು ಹೋದಾಗ ಅವರಿಗೆ ಅನುಮಾನ ಕಾಡಿತು. ನೋಯ್ಡಾದ ವೈದ್ಯರಲ್ಲಿ ತೋರಿಸಿ ಎಂದು ಸೂಚಿಸಿದರು. ಅಲ್ಲಿ ರಕ್ತದ ಕ್ಯಾನ್ಸರ್ ಕುರುಹು ಕಂಡುಬಂತು. ಆಗ ಅದು “ಸೆಕೆಂಡ್ ಸ್ಟೇಜ್’ನಲ್ಲಿತ್ತು. ದೇಹದ ಶೇ. 47ರಷ್ಟು ಭಾಗಕ್ಕೆ ಹಾನಿಯಾಗಿತ್ತು.
Advertisement
ಅಂಡರ್-19 ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ, 2 ಶತಕ ಸಹಿತ 800ರಷ್ಟು ರನ್ ಪೇರಿಸಿದ ಬಳಿಕ ಕಮಲ್ ಈಗ ರಣಜಿಗೆ ಕಾಲಿಟ್ಟು ಶತಕ ಬಾರಿಸಿದ್ದಾರೆ. ಇವರು ಕ್ಯಾನ್ಸರ್ ಗೆದ್ದ ಕತೆ ಎಲ್ಲರಿಗೂ ಸ್ಫೂರ್ತಿ ಆಗಲಿ.
ವಿಷಯ ಮುಚ್ಚಿಟ್ಟರು…“15ರ ಹರೆಯದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಲಾರಂಭಿಸಿತು. ಒಂದು ವರ್ಷ ಏನೂ ಮಾಡಲಾಗಲಿಲ್ಲ. ಅದು ಲ್ಯುಕೇಮಿಯಾ ಆಗಿತ್ತು. ಕುಟುಂಬದವರು ನನ್ನಲ್ಲಿ ಈ ವಿಷಯವನ್ನು ಮುಚ್ಚಿಟ್ಟರು. ಇದನ್ನು ಖಂಡಿತ ಹೊಡೆದೋಡಿಸಬಹುದೆಂದು ವೈದ್ಯರು ಭರವಸೆ ನೀಡಿದರಂತೆ. ನನ್ನ ದೇಹ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿತ್ತು. ನನ್ನ ಸುತ್ತಲೂ ನನ್ನನ್ನು ಖುಷಿಪಡಿಸುವ, ಧೈರ್ಯ ತುಂಬುವ ಜನರನ್ನೇ ಇರುವಂತೆ ನೋಡಿಕೊಳ್ಳಲಾಯಿತು. ಇದು ಫಲ ಕೊಟ್ಟಿತು. ನಾನು ಸಂಪೂರ್ಣ ಚೇತರಿಸಿಕೊಂಡೆ’ ಎನ್ನುತ್ತಾರೆ ಕಮಲ್ ಕನ್ಯಾಲ್.