Advertisement
ಸ್ಮಶಾನದಲ್ಲಿ ಪ್ರತಿ ಮಸಣಕ್ಕೆ ಒಬ್ಬರಂತೆ ಮಸಣ ಕಾರ್ಮಿಕರನ್ನು ನೇಮಿಸಬೇಕು ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಟ 2500 ರೂಗಳನ್ನು ಪಾವತಿಸಬೇಕು. ಮಸಣ ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ ಮತ್ತು ಮುಚ್ಚುವ ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಬೇಕು. ನಮ್ಮನ್ನು ಕಟ್ಟಡ ಕಾರ್ಮಿಕರ ಪಟ್ಟಿಗೆ ಸೇರಿಸಿ. ಕಟ್ಟಡ ಕಾರ್ಮಿಕರಿಗಿರುವ ಎಲ್ಲ ಕಲ್ಯಾಣ ಸೌಲಭ್ಯಗಳನ್ನು ದೊರೆಯುವಂತೆ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಪಾವತಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ತಕ್ಷಣವೇ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Related Articles
Advertisement
ಹಗರಿಬೊಮ್ಮನಹಳ್ಳಿಯಲ್ಲೂ ಪ್ರತಿಭಟನೆ :
ಹಗರಿಬೊಮ್ಮನಹಳ್ಳಿ: ಸಾರ್ವಜನಿಕ ಮಸಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ಗ್ರಾಪಂ ನೌಕರರು ಎಂದು ನೇಮಕ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದವರು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ಮಸಣದಲ್ಲಿ ಪಾರಂಪರಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾಮಿಕರನ್ನು ಪಂಚಾಯ್ತಿ ನೌಕರರೆಂದು ನೇಮಕ ಮಾಡಿಕೊಳ್ಳಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇಬ್ಬರು ಮಸಣ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಮಸಣದಲ್ಲಿ ಕೆಲಸ ಮಾಡಲುಸುರಕ್ಷಿತ ಕ್ರಮ ಜರುಗಿಸಬೇಕು. ಕುಣಿ ತೆಗೆಯುವ ಮುಚ್ಚುವ ಸಲಕರಣೆಗಳನ್ನು ಸ್ಥಳೀಯ ಸಂಸ್ಥೆಗಳಿಂದ ಕೊಡಬೇಕು. ಮಸಣ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರು ಎಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗೆ ಇರುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಮಸಣದಲ್ಲಿ ಬೆಳೆದಿರುವ ಮುಳ್ಳುಕಂಟೆಗಳನ್ನು ಸ್ವಚ್ಛಗೊಳಿಸಲು ಎನ್‌ಆರ್‌ಇಜಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಪ್ರತಿ ಗ್ರಾಮದಲ್ಲಿ ದಲಿತರರಿಗಾಗಿ ಪ್ರತ್ಯೇಕ ಮಸಣ ನೀಡಬೇಕು. ಕಾಡು ಸೋಸುವಾಗ ಪ್ರತಿ ಕಾರ್ಮಿಕರಿಗೆ 2000ರೂ ಹಣ ನೀಡಬೇಕು ಎಂದು ಒತ್ತಾಯಿಸಿದರು. ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಮೈಲಮ್ಮ, ಚಾಂದ್‌ಭೀ, ಅಂಜಿನಮ್ಮ, ಎಸ್‌ಎಫ್ ಐನ ಗುಳೇದಾಳು ಬಸವರಾಜ ಮಾತನಾಡಿದರು.
ಮಸಣ ಕಾರ್ಮಿಕರ ಸಂಘದ ಅಧ್ಯಕ್ಷ ಹೆಚ್ .ನಾಗೇಂದ್ರಪ್ಪ, ಕಾರ್ಯದರ್ಶಿ ಲಿಂಗರಾಜ, ಸಿಐಟಿಯುನ ಎಸ್. ಜಗನ್ನಾಥ, ಹನುಮಂತಪ್ಪ, ಹುಲುಗಪ್ಪ, ಬಸವರಾಜಪ್ಪ, ಮರಿಯಪ್ಪ, ರಂಗಪ್ಪ, ಮಾರುತಿ ಇತರರಿದ್ದರು.