ಹರಪನಹಳ್ಳಿ: ಪೆಟ್ರೋಲ್, ಡೀಸೆಲ್ ಅಡುಗೆ ಎಣ್ಣೆ ದರ ಕಡಿಮೆಯಾದ ಬೆನ್ನಲ್ಲೆ ಸಿಮೆಂಟ್, ಕಬ್ಬಿಣ, ಜಿಂಕ್ ದರವೂ ಕೂಡಾ ಕಡಿಮೆಯಾಗಲಿದೆ, ಕಾದು ನೋಡಿ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಶಾಸಕ ಜಿ.ಕರುಣಾಕರ ರೆಡ್ಡಿಯವರ ಸಮ್ಮುಖದಲ್ಲಿ ಶನಿವಾರ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಕೊರಾನಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಲಿದೆ. ಸಿಲಿಂಡರ್ ಗ್ಯಾಸ್ ದರ ಕೂಡ ಕಡಿಮೆಯಾಗಲಿದೆ ಎಂದರು.
ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತ ಭಾರತವಾಗಲಿ: ಖೂಬಾ
ದೇಶದಲ್ಲಿ ಆದಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಗತ್ಯ ವಸ್ತುಗಳ ದರದಲ್ಲಿ ಬೆಲೆ ಕಡಿಮೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವ ವಿಚಾರವನ್ನು ಪ್ರಧಾನಿ ಮೋದಿ ಹಾಗೂ ಆರ್ಥಿಕ ತಜ್ಞರು ತಿಳಿದಿರುತ್ತಾರೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ಪ್ರಧಾನಿ ಸಿದ್ಧರಿದ್ದರು. ಆದರೆ ಆಯಾ ರಾಜ್ಯಗಳು ಈ ಧೋರಣೆಯನ್ನು ವಿರೋಧಿಸಿದರು ಎಂದು ಹೇಳಿದರು.
ಉಪಚುನಾವಣೆಗಳಲ್ಲಿ ಸೋತ ಕಾರಣಕ್ಕೆ ಯಾವುದೇ ವಸ್ತುಗಳ ದರವನ್ನು ಇಳಿಕೆ ಮಾಡಿಲ್ಲ. ಇದು ಕೇವಲ ಊಹಾಪೋಹ ಅಷ್ಟೇ ಎಂದರು.