ದುಬೈ : ಹೆಣ್ಣಿಗೆ ತಾಯ್ತನ ಎನ್ನುವುದು ಅತ್ಯಂತ ನೋವಿನ ಕ್ಷಣವಾದರೂ ಆತೀ ಹೆಚ್ಚು ಸಂಭ್ರಮಿಸುವ ಕ್ಷಣ. ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಪಾಲಿಗೂ ಮತ್ತೆ ಅವಳಿ ಸಂಭ್ರಮವಾಗಿದ್ದು , ಇದೇ ವೇಳೆ ತೀವ್ರ ನೋವು ಆವರಿಸಿಕೊಂಡಿದೆ.
ಈಗಾಗಲೇ ಇಬ್ಬರು ಅವಳಿ ಮಕ್ಕಳ ತಾಯಿಯಾಗಿರುವ ಸೆಲೀನಾ ಕೆಲ ದಿನಗಳ ಹಿಂದೆ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಸಿಹಿ ಕಹಿಯ ಆಗಮನ ಎಂದು ಬರೆದುಕೊಂಡಿದ್ದಾರೆ.
ಪತಿ ಪೀಟರ್ ಹಾಗ್ ಅವರೊಂದಿಗೆ ದುಬೈನಲ್ಲಿ ನೆಲೆಸಿರುವ ಸೆಲೀನಾಗೆ ಈಗಾಗಲೆ ವಿನ್ಸ್‌ಟನ್ ಮತ್ತು ವಿರಾಜ್ ಎನ್ನುವ 5 ವರ್ಷ ಪ್ರಾಯದ ಇಬ್ಬರು ಅವಳಿ ಮಕ್ಕಳಿದ್ದಾರೆ.
ಇಬ್ಬರು ಮಕ್ಕಳಿಗೆ ಅಥುರ್ ಜೇಟ್ಲಿ ಹಾಗ್ ಮತ್ತು ಶಂಶೇರ್ ಜೇಟ್ಲಿ ಹಾಗ್ ಎಂದು ಹೆಸರಿಟ್ಟಿದ್ದರು. ಆದರೆ ಹೃದಯ ಸಮಸ್ಯೆಗೆ ಶಂಶೇರ್ ಈ ಪ್ರಪಂಚ ಬಿಟ್ಟು ತೆರಳಿದ್ದಾನೆ ಎಂದು ಸೆಲೀನಾ ನೋವಿನಿಂದ ಬರೆದುಕೊಂಡಿದ್ದಾರೆ.
2 ತಿಂಗಳ ಹಿಂದಷ್ಟೆ ಸೆಲೀನಾ ತಂದೆ ತೀರಿಕೊಂಡಿದ್ದರು. ತೀವ್ರ ನೊಂದಿದ್ದ ಅವರು ತಾಯಿಯಾಗಿ ಸಂಭಮಿಸುವ ವೇಳೆ ಮತ್ತೆ ನೋವು ಅವರನ್ನು ಕಾಡಿದೆ. ನನ್ನ ಜೀವನ ಪ್ರಕ್ಷುಬ್‌ಧವಾಗಿದೆ ಎಂದು ಬರೆದಿದ್ದಾರೆ.