Advertisement

ಹಕ್ಕು ಚಲಾಯಿಸಿದ ಗಣ್ಯ-ಸೆಲೆಬ್ರಿಟಿಗಳು

11:40 AM May 13, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಘಟಾನುಘಟಿ ರಾಜಕೀಯ ನಾಯಕರು, ಸೆಲೆಬ್ರೆಟಿಗಳು, ಗಣ್ಯರು ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದರು. ಕೇಂದ್ರ ಸಚಿವ ಬಿಜೆಪಿಯ ಹಿರಿಯ ಮುಖಂಡ ಅನಂತ್‌ ಕುಮಾರ್‌ ವಿವಿಪುರಂನ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಮತದಾನ ಮಾಡಿದರು.

Advertisement

ಎಚ್‌ಎಎಲ್‌ನ ಮೂರನೇ ಹಂತದಲ್ಲಿರುವ ನ್ಯೂ ತಿಪ್ಪಸಂದ್ರದ ಮತಗಟ್ಟೆಯಲ್ಲಿ ಅರವಿಂದ ಲಿಂಬಾವಳಿ, ಡಾಲರ್ಸ್‌ ಕಾಲೋನಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬನಶಂಕರಿ 2ನೇ ಹಂತದ ಬಿ.ಎನ್‌.ಎಂ ಶಾಲೆಯಲ್ಲಿ, ಸಂಸದರಾದ ಪಿ.ಸಿ.ಮೋಹನ್‌ ತಮ್ಮ ಹಕ್ಕು ಚಲಾಯಿಸಿದರು.

ಕೋರಮಂಗಲದ 3ನೇ ಹಂತದಲ್ಲಿರುವ ರೆಡ್ಡಿ ಜನಸಂಘ ಶಾಲೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ರಾಜಾಜಿನಗರದ ವಿ.ಎನ್‌.ಎಸ್‌ ಶಾಲೆಯಲ್ಲಿ ಮಾಜಿ ಸಚಿವ ಸುರೇಶ್‌ ಕುಮಾರ್‌, ಜಾಲಹಳ್ಳಿಯಲ್ಲಿ ಆರ್‌.ಅಶೋಕ್‌, ಅಶ್ವತ್ಥ್ ನಗರದಲ್ಲಿ ಡಾ.ಅಶ್ವತ್ಥ್ನಾರಾಯಣ, ಶೆಟ್ಟಿಹಳ್ಳಿಯಲ್ಲಿ ಮುನಿರಾಜು, ಸದಾಶಿವನಗರದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ಗುಡ್‌ ವಿಲ್‌ ಶಾಲೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ  ಮತ ಹಾಕಿದರು. 

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಮಲ್ಲೇಶ್ವರದ ಕೇಂದ್ರಿಯ ವಿದ್ಯಾಲಯದಲ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರ್‌.ಟಿ.ನಗರದಲ್ಲಿ, ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಟಿಎಂ ವಿಧಾನ ಸಭಾ ಕ್ಷೇತ್ರದಲ್ಲಿ, ಸಚಿವ ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ವಿಜಯನಗರ ಕ್ಷೇತ್ರದ ಹೋಲಿ ಅಂಜೆಲ್‌ ಶಾಲೆಯಲ್ಲಿ ಮತದಾನ ಮಾಡಿದರು.

ಶಾಸಕ  ಎಸ್‌.ಟಿ.ಸೋಮಶೇಖರ್‌ ನಾಗದೇವನ ಹಳ್ಳಿಯಲ್ಲಿ, ಸಚಿವ ಕೆ.ಜೆ.ಜಾರ್ಜ್‌ ಚೆಲ್ಲಘಟ್ಟದ ವಾರ್ಡ್‌ ನಂ.150ರಲ್ಲಿ, ಮಾಜಿ ಮೇಯರ್‌ ಪದ್ಮಾವತಿ ರಾಜಾಜಿನಗರದ ರಾಮಮಂದಿರದಲ್ಲಿ  ಮತ ಚಲಾಯಿಸಿದರು.  ಇನ್ನೂ, ಮಹಾಲಕ್ಷಿ ಲೇಔಟ್‌ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ.ಗೋಪಾಲಯ್ಯ ಅವರು ವೃಷಭಾವತಿ ನಗರದ ಅಮರವಾಣಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತಚಲಾಯಿಸಿದರು.

Advertisement

ಗೋವಿಂದರಾಜನಗರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ , ಶಾಂತಿನಗರ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಎ.ಹ್ಯಾರೀಸ್‌,  ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಅಶ್ವಥ್‌ನಾರಾಯಣ, ಸರ್‌.ಸಿ.ರಾಮನ್‌ನಗರ ಬಿಜೆಪಿ ಅಭ್ಯರ್ಥಿ ಎಸ್‌.ರಘು ಕುಟುಂಬ ಸಮೇತ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಚಲಾಯಿಸಿದರು. 

ಸದಾ ಶಿವನಗರದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಬನಶಂಕರಿ ಮತಗತಗಟ್ಟೆಯಲ್ಲಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಕುಟುಂಬ ಸಮೇತ ಮತದಾನ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ್‌ ಕಂಬಾರ ಸೇರಿದಂತೆ ಸಾಹಿತ್ಯ ಲೋಕದ ಹಲವು ದಿಗ್ಗಜರು ಮತ ಚಲಾಯಿಸಿದರು. ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯಸ್ವಾಮಿಗಳು ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದ ಮತದಾನ ಕೇಂದ್ರ ನಂ.377ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next