Advertisement

ಕೆರೂರ ರಾಚೋಟೇಶ್ವರನ ಲಕ್ಷ ದೀಪೋತ್ಸವ ಆಚರಣೆ

05:44 PM Dec 30, 2021 | Team Udayavani |

ಕೆರೂರ: ಸ್ಥಳೀಯ ರಾಚೋಟೇಶ್ವರ, ಭದ್ರಕಾಳಿ ಮಾತೆಗೆ ಈ ಬಾರಿ ವಿಶೇಷವಾಗಿ ಲಕ್ಷ ದೀಪೋತ್ಸವದ ಕಾರ್ತಿಕ ಉತ್ಸವ ಮಂಗಳವಾರ ರಾತ್ರಿ ವಿವಿಧ ಬಗೆಯ ಧಾರ್ಮಿಕ ಆಚರಣೆಗಳೊಂದಿಗೆ ಸದ್ಭಕ್ತರ ಸಮ್ಮುಖದಲ್ಲಿ ವಿಜೃಭಣೆಯಿಂದ ಜರುಗಿತು.

Advertisement

ಈ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಕಾರ, ಅಭಿಷೇಕ ಮುಂತಾದ ಧಾರ್ಮಿಕ ಆಚರಣೆಗಳು ನೆರವೇರಿದರೆ, ರಾಚೋಟೇಶ್ವರನ ಮೂರ್ತಿಯನ್ನು ಸಿಂಗರಿಸಲಾಗಿತ್ತು. ರಾತ್ರಿ ದೇವಸ್ಥಾನದ ಆವರಣದ ವಿಶಾಲ ಕಟ್ಟೆಯ ಎದುರು ಕಾರ್ತಿಕೋತ್ಸವ ನಿಮಿತ್ತ ಭಕ್ತಾದಿ ಗಳು ಸಹಸ್ರಾರು ಹಣತೆಗಳನ್ನು ಬೆಳಗಿಸುವ ಮೂಲಕ “ಕಾರ್ತಿಕ ಉತ್ಸವ’ ಆಚರಣೆ ಮೂಲಕ ವಿವಿಧೆಡೆಗಳಿಂದ ಉತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳು ಸಂತಸಪಟ್ಟರು.

ನಂತರ ಅರ್ಚಕರು ಹಾಗೂ ಹಲವು ಯುವ ಭಕ್ತಾದಿಗಳು ಪಲ್ಲಕ್ಕಿ ಉತ್ಸವವು ದೇವಾಲಯದ ಸುತ್ತ ಮೆರವಣಿಗೆಯ ಪ್ರದಕ್ಷಿಣೆಯಲ್ಲಿ ರಾಚೋಟೇಶ್ವರನ ಗರ್ಭ ಗುಡಿಯ ಮುಂಭಾಗದಲ್ಲಿ ಉತ್ಸವದ ಗತಕಾಲದ ಸಂಪ್ರದಾಯದಂತೆ ಭಕ್ತಿಯ ಖಡೆಯ ಒಡಪುಗಳನ್ನು ಹೇಳುತ್ತಿದ್ದರೆ, ಸುತ್ತಮುತ್ತಲು ಕಿಕ್ಕಿರಿದು ನೆರೆದಿದ್ದ ನೂರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಖಡೆ, ಖಡೆ ಉದ್ಘಾರದೊಂದಿಗೆ “ರಾಚೋಟೇಶ್ವರನ’ ನಾಮಸ್ಮರಣೆಯಲ್ಲಿ ತೊಡಗಿದ್ದರು.

ಕಾರ್ತಿಕೋತ್ಸವದ ನಿಮಿತ್ತ ಭಕ್ತಾದಿಗಳಿಗೆ ರಾಚೊಟೇಶ್ವರ ದೇವಾಲಯದ ಬಿ.ಬಿ. ನಿಲುಗಲ್‌ ಕಲ್ಯಾಣ ಮಂಟಪದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಏರ್ಪಡಿಸಿತ್ತು. ಸ್ಥಳೀಯ ಗಣ್ಯ ಪರಿವಾರದ ಎಂ.ಸಿ. ಘಟ್ಟದ ಅವರು ಲಕ್ಷ ದೀಪೋತ್ಸವದ ಪ್ರಾಯೋಜಕತ್ವ ವಹಿಸಿದ್ದರು. ಶೆಟ್ಟರ, ಪತ್ತಾರ ಮತ್ತಿತರ ಪ್ರಮುಖ ಪರಿವಾರದವರು ಆಚರಣೆಗಳ ಉಸ್ತುವಾರಿ ವಹಿಸಿದ್ದರು.

ದೇವಾಲಯ ಜೀರ್ಣೋದ್ಧಾರ ಸಮಿತಿಯ ಚೇರಮನ್‌ ಆರ್‌.ಆರ್‌. ಶೆಟ್ಟರ, ಕಾಶೀನಾಥ ವೀರಣ್ಣ ಪತ್ತಾರ, ಆರ್‌. ಎನ್‌. ಶೆಟ್ಟರ, ಮಲ್ಲಪ್ಪಜ್ಜ ಘಟ್ಟದ, ಮರ್ಚಂಟ್ಸ್‌ ಬ್ಯಾಂಕ್‌ ಚೇರಮನ್‌ ಧನಂಜಯ ಕಂದಕೂರ, ವಿಜಯಕುಮಾರ ಐಹೊಳ್ಳಿ, ಬಸವರಾಜ ದಂಡಿನ, ಶಿವಪುತ್ರಪ್ಪ ಹುಂಡೇಕಾರ, ರಾಚಪ್ಪ ಶೆಟ್ಟರ, ಬಸವರಾಜ ಹುಂಡೇಕಾರ, ಉಮೇಶ ಕೊಣ್ಣೂರ, ಡಾ| ರಾಚಪ್ಪ ಹುಂಡೇಕಾರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next