Advertisement

ಹನಗೋಡು ಭಾಗದಲ್ಲಿ ಸಂಭ್ರಮದ ಹುತ್ತರಿ ಹಬ್ಬ ಆಚರಣೆ

09:56 PM Dec 09, 2022 | Team Udayavani |

ಹುಣಸೂರು: ಕೊಡಗಿನ ಪ್ರಮುಖ ಹಬ್ಬಗಳಲ್ಲೊಂದಾದ ಹುತ್ತರಿ ಹಬ್ಬವನ್ನು ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ, ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕೊಡಗು ಮೂಲದವರು ಸಂಭ್ರಮದಿಂದ ಆಚರಿಸಿದರು.

Advertisement

ಹನಗೋಡು ಸೇರಿದಂತೆ ಬಿಲ್ಲೇನಹೊಸಳ್ಳಿ ಕೆ.ಜಿ.ಹಬ್ಬನಕುಪ್ಪೆ, ಉಡುವೇಪುರ, ಕಿಕ್ಕೇರಿಕಟ್ಟೆ, ಕಾಳಬೋಚನಹಳ್ಳಿ, ಬಿ,ಆರ್.ಕಾವಲ್ ಗ್ರಾಮಗಳಲ್ಲಿ ರಾತ್ರಿ ಆಯೋಜಿಸಿದ್ದ ಹುತ್ತರಿ ಹಬ್ಬದಲ್ಲಿ ಪಾಲ್ಗೊಂಡು ತಾವು ಬೆಳೆದಿರುವ ಗದ್ದೆಯಲ್ಲಿ ಭತ್ತದ ತೆನೆಯನ್ನು ತಂದು ಪೂಜಿಸಿ, ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡರು.

ಕೊಡಗಿನ ಸಾಂಪ್ರಾದಾಯಿಕ ಉಡುಗೆ-ತೊಡುಗೆ ತೊಟ್ಟು ಕಳಸದೊಂದಿಗೆ ಕತ್ತಿ ಕೋವಿಗಳನ್ನು ಪೂಜಿಸಿ, ಪುಲಿ ಪುಲಿ ದೇವಾ….. ಎಂಬ ಜಯ ಘೋಷಣೆಯೊಂದಿಗೆ ಪಟಾಕಿ ಸಿಡಿಸಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಹೊಸದಾಗಿ ಬೆಳೆದ ಗದ್ದೆಯಲ್ಲಿ ಭತ್ತವನ್ನು ಪೂಜಿಸಿ, ತೆನೆ ಸಮೇತ ಧಾನ್ಯವನ್ನು ಮನೆಗೆ ತಂದು ಪೂಜಿಸಿ ಹೊಸ ಅಕ್ಕಿಯಿಂದ ವಿಶೇಷ ಅಡಿಗೆ ತಯಾರಿಸಿ ಸೇವಿಸುವ ಈ ಹಬ್ಬವನ್ನು ಎಲ್ಲೆಡೆ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next