Advertisement

ಗ್ರಾಮಾಂತರದ ವಿವಿಧೆಡೆ ಸಂಭ್ರಮದ ಮೊಸರು ಕುಡಿಕೆ ಉತ್ಸವ

10:58 PM Aug 24, 2019 | mahesh |

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಸಂಭ್ರಮವೂ ಅದ್ದೂರಿ, ಸಾಂಪ್ರದಾಯಿಕವಾಗಿ ಜರಗಿತು. ವಿವಿಧ ವೇಷಗಳೊಂದಿಗೆ ಕೃಷ್ಣ ದೇವರನ್ನು ರಥದಲ್ಲಿ ಅಜಾರು ಕೃಷ್ಣಕಟ್ಟೆಯವರೆಗೆ ಕರೆದೊಯ್ದು ಅನಂತರ ರಥಬೀದಿಯಲ್ಲಿ ವಿವಿಧ ವೇಷಧಾರಿಗಳಿಂದ ಸೇವೆ ನಡೆಯಿತು. ಪರಿಸರದ ಗ್ರಾಮಸ್ಥರಿಗೆ ವಿವಿಧ ಸ್ಫರ್ಧೆ ಗಳನ್ನು ಏರ್ಪಡಿಸಲಾಯಿತು.

Advertisement

ಮೂಲ್ಕಿ ಶ್ರೀ ವೆಂಕಟರಮಣ ದೇಗುಲ

ಮೂಲ್ಕಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೂಲ್ಕಿ ಶ್ರೀ ವೆಂಕಟರಮಣ ದೇಗುಲದಲ್ಲಿ ಶನಿವಾರ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ನಡೆಯಿತು.

ದೇಗುಲದ ಸಂಪ್ರದಾಯದಂತೆ ನೂರಾರು ವರ್ಷಗಳಿಂದ ನಡೆಯುತ್ತಿರುವ ಈ ಉತ್ಸವದಲ್ಲಿ ದೇವರ ವಿಶೇಷ ಉತ್ಸವ ಮೆರವಣಿಗೆ ಪಲ್ಲಕ್ಕಿಯಲ್ಲಿ ನಡೆಯುವುದಲ್ಲದೆ ಬಾಲಕೃಷ್ಣ ವೇಷಧಾರಿಗಳು ಮಡಕೆ ಒಡೆಯುವ ಕಾರ್ಯಕ್ರಮವೂ ನಡೆಯಿತು.

ಕೊನೆಯಲ್ಲಿ ನಯವಾಗಿ ಪಾಲಿಷ್‌ ಮಾಡಿ ಗ್ರೀಸ್‌ ಹಚ್ಚಲಾದ ಅಡಿಕೆ ಮರಕ್ಕೆ ಸಾಹಸದಿಂದ ಏರಿ ಮರದ ತುದಿಯಲ್ಲಿ ಇರಿಸಲಾದ ನಿಧಿಯನ್ನು ತೆಗೆಯುವ ಸ್ಪರ್ಧೆಯಲ್ಲಿ ಹಲವಾರು ಯುವಕರು ಭಾಗವಹಿಸಿದರು.

Advertisement

ಪುನರೂರು: ಮೊಸರು ಕುಡಿಕೆ

ಪುನರೂರು: ಇಲ್ಲಿನ ನಂದಿ ಫ್ರೆಂಡ್ಸ್‌ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆಯ ಮೆರವಣಿಗೆಯ ಶನಿವಾರ ಮಧ್ಯಾಹ್ನ ಎಸ್‌. ಕೋಡಿಯಿಂದ ಪ್ರಾರಂಭವಾಗಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದವರೆಗೆ ಮಡಕೆ ಒಡೆಯುವ ಕಾರ್ಯಕ್ರಮ ನಡೆಯಿತು.

ಸುಂಕದಕಟ್ಟೆ: ದೇವಸ್ಥಾನ

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಶನಿವಾರ ಜರಗಿತು.

ಮಧ್ಯಾಹ್ನ ದೇವಸ್ಥಾನದಿಂದ ವಿವಿಧ ವೇಷದೊಂದಿಗೆ ಸಮೀಪದ ದೇವರುಕಟ್ಟೆಗೆ ಆಗಮಿಸಿ, ಅನಂತರ ಕೃಷ್ಣರಾಧೆ ಯಕ್ಷಗಾನ ವೇಷಧಾರಿ ಉಪಸ್ಥಿತಿಯೊಂದಿಗೆ ಮೊಸರು ಕುಡಿಕೆಯನ್ನು ಒಡೆಯಲಾಯಿತು. ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಬಯಲಾಟ, ಅಡಿಕೆ ಮರ ಹತ್ತುವುದು, ಕೃಷ್ಣ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆ, ವಿನೋದಾವಳಿಗಳು ನಡೆದವು. ಮೊಕ್ತೇಸರ ನಾರಾಯಣ ಎನ್‌. ಪೂಜಾರಿ, ಜ್ಯೋತಿ ನಾರಾಯಣ ಪೂಜಾರಿ, ವಿನೋಧರ ಪೂಜಾರಿ, ಸುಕೇಶ್‌ ಮಾಣಾೖ, ಹರೀಶ್‌ ಪೈ, ಕತ್ತಲ್ ಸಾರ್‌, ತಿಮ್ಮ್ಮಪ್ಪ ಗುಜರನ್‌, ಹರೀಶ್‌ ಶೆಟ್ಟಿ, ಬೂಬ ಪೂಜಾರಿ ಮೊದಲಾದವರಿದ್ದರು.

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ ಜರಗಿತು (ಚಿತ್ರ1), ಮೂಲ್ಕಿ : ಇಲ್ಲಿನ ಶ್ರೀ ವೆಂಕಟರಮಣ ದೇಗುಲದಲ್ಲಿ ಶನಿವಾರ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ನಡೆಯಿತು.

ಮೂಲ್ಕಿ: 26 ವರ್ಷಗಳಿಂದ ನಡೆಸಲಾಗುತ್ತಿರುವ ಮೂಲ್ಕಿ ಕಾರ್ನಾಡು ಸದಾಶಿವ ನಗರದ ಮೊಸರು ಕುಡಿಕೆ ಉತ್ಸವ ಈ ಬಾರಿಯೂ ಸಹಸ್ರಾರು ಜನರ ಭಾಗವಹಿಸುವಿಕೆಯಲ್ಲಿ ಸಂಪನ್ನಗೊಂಡಿತು. ಇಲ್ಲಿಯ ಮೊಸರು ಕುಡಿಕೆ ಉತ್ಸವದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಸ್ಪರ್ಧಾಳುಗಳು ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಂಜೆಯ ವೇಳೆಗೆ ಕೆಇಬಿಯ ಬಳಿಯಿಂದ ಮೆರವಣಿಗೆಯಲ್ಲಿ ಮಡಿಕೆಯನ್ನು ಒಡೆಯುವ ಮೂಲಕ ಸಾಗಿ ಬಂದ ಮೆರವಣಿಗೆಯು ಸರಕಾರಿ ಶಾಲಾ ವಠಾರದಲ್ಲಿ ಸಂಪನ್ನಗೊಂಡು ವಿವಿಧ ಸ್ಪರ್ಧೆಗಳು ರಾತ್ರಿಯ ತನಕವೂ ಮುಂದುವರಿದವು.

ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವದಲ್ಲಿ ಮಳಲಿಯ ಚಂದ್ರಶೇಖರ ಕುಲಾಲ್ ಅವರು ತೂಗುಹಾಕಲಾದ ಮೊಸರ ಕುಡಿಕೆಗಳನ್ನು ಒಡೆಯುವ ಧಾರ್ಮಿಕ ಕಲಾ ಸೇವೆಯನ್ನು ನಡೆಸಿಕೊಟ್ಟರು.

ಕಾರ್ನಾಡು ಸದಾಶಿವ ನಗರ: ಮೊಸರು ಕುಡಿಕೆ ಸಂಪನ್ನ

ಮೂಲ್ಕಿ: 26 ವರ್ಷಗಳಿಂದ ನಡೆಸಲಾಗುತ್ತಿರುವ ಮೂಲ್ಕಿ ಕಾರ್ನಾಡು ಸದಾಶಿವ ನಗರದ ಮೊಸರು ಕುಡಿಕೆ ಉತ್ಸವ ಈ ಬಾರಿಯೂ ಸಹಸ್ರಾರು ಜನರ ಭಾಗವಹಿಸುವಿಕೆಯಲ್ಲಿ ಸಂಪನ್ನಗೊಂಡಿತು. ಇಲ್ಲಿಯ ಮೊಸರು ಕುಡಿಕೆ ಉತ್ಸವದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಸ್ಪರ್ಧಾಳುಗಳು ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಂಜೆಯ ವೇಳೆಗೆ ಕೆಇಬಿಯ ಬಳಿಯಿಂದ ಮೆರವಣಿಗೆಯಲ್ಲಿ ಮಡಿಕೆಯನ್ನು ಒಡೆಯುವ ಮೂಲಕ ಸಾಗಿ ಬಂದ ಮೆರವಣಿಗೆಯು ಸರಕಾರಿ ಶಾಲಾ ವಠಾರದಲ್ಲಿ ಸಂಪನ್ನಗೊಂಡು ವಿವಿಧ ಸ್ಪರ್ಧೆಗಳು ರಾತ್ರಿಯ ತನಕವೂ ಮುಂದುವರಿದವು.
Advertisement

Udayavani is now on Telegram. Click here to join our channel and stay updated with the latest news.

Next