Advertisement

ಶ್ರದ್ಧೆಯಿಂದ ಧರ್ಮ ಆಚರಿಸಿದಾಗ ಮೋಕ್ಷ

02:38 PM Mar 16, 2017 | Team Udayavani |

ಕಾರ್ಕಳ: ಶ್ರದ್ಧೆಯಿಂದ ಆಚರಿಸುವುದು  ನಿಜವಾದ ಧರ್ಮ,ಯಾವುದನ್ನು ನಾವು ಶ್ರದ್ಧೆಯಿಂದ ಆಚರಿಸುತ್ತೇವೆಯೋ ಅದೇ ಮೋಕ್ಷಕ್ಕೆ ಕಾರಣ ಎಂದು ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದ್ದಾರೆ.

Advertisement

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾ ಭಿಷೇಕದ ಪ್ರಯುಕ್ತ  ಮಾ. 14ರಂದು ಜರಗಿದ  ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ತನಗಾಗಿ ಬದುಕುವುದು ಧರ್ಮದ  ಲಕ್ಷಣವಲ್ಲ. ಇತರರ ಒಳಿತಿಗಾಗಿ ಬದುಕುವುದು ಧರ್ಮವಾಗುತ್ತದೆ. ಬದುಕಿನಲ್ಲಿ ಒಣ ತರ್ಕ ಯಾವ ಪ್ರಯೋಜನಕ್ಕೂ ಬರದು, ಹೇಳಿದಂತೆ ಬದುಕುವುದು, ಅನುಸರಿಸುವುದು ಹಾಗೂ ಶ್ರದ್ಧೆಯಿಂದ ನಮ್ಮ ಧರ್ಮಕ್ಕೆ ನಿಷ್ಠರಾಗಿರುವುದು ಅತೀ ಮುಖ್ಯ ಎಂದವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ  ಪುರೋಹಿತ್‌ ವೇಲಾಪುರೀ ವಿಶ್ವನಾಥ ಶರ್ಮಾ ಸತ್ಯ,ಧರ್ಮ, ನಿಷ್ಠೆ, ಭಕ್ತಿಯ ಕುರಿತು ಸಂದೇಶ ನೀಡಿದರು.

ಅಧ್ಯಕ್ಷತೆ ವಹಿಸಿದ ಆಡಳಿತ ಮೊಕ್ತೇಸರ ಕೆ. ಹರೀಶ್‌ ಆಚಾರ್ಯ ಮಾತನಾಡಿ, ಕ್ಷೇತ್ರಕ್ಕೆ ದೇವಿಯ ಆಶೀರ್ವಾದ ಸದಾ ಇದೆ. ಈ ಆಶೀರ್ವಾದವೇ ಇಷ್ಟೆಲ್ಲಾ  ಧಾರ್ಮಿಕ ಕೆಲಸಗಳಿಗೆ ಕಾರಣವಾಯಿತು ಎಂದರು.

Advertisement

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುರಸಭಾ ಅಧ್ಯಕ್ಷೆ ಅನಿತಾ ಆರ್‌ ಅಂಚನ್‌, ಪುರಸಭಾ ಸದಸ್ಯ ಪ್ರಕಾಶ್‌ ರಾವ್‌,ಕುಕ್ಕುಂದೂರು ಗ್ರಾ.ಪಂ. ಸದಸ್ಯೆ ಜ್ಯೋತಿ ರಮೇಶ್‌ ಶುಭ ಹಾರೈಸಿದರು.

ಜೊತೆ ಮೊಕ್ತೇಸರ ಕೆ. ರತ್ನಾಕರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ,  ಗೌರವಾಧ್ಯಕ್ಷ ಕೆ. ಸುಧಾಕರ ಆಚಾರ್ಯ ಹಾಗೂ ಕೂಡುವಳಿಕೆ ಮೊಕ್ತೇಸರರು  ಉಪಸ್ಥಿತರಿದ್ದರು.

ನಳಿನಿ ವಿಜೇಂದ್ರ ಮತ್ತು ಹರ್ಷವರ್ಧನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸರೋಜಿನಿ ವಸಂತ್‌ ಸ್ವಾಗತಿಸಿ, ವೈ .ಜಗದೀಶ್‌ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next