Advertisement

ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ಆಚರಿಸಿ: ರೇಣುಕಾ

01:17 PM Aug 27, 2019 | Suhan S |

ಕೊಪ್ಪಳ: ಗೌರಿ-ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥಿಕವಾಗಿ ಆಚರಣೆ ಮಾಡಬೇಕು ಎಂದು ಎಸ್‌ಪಿ ರೇಣುಕಾ ಸುಕುಮಾರ ಹೇಳಿದರು.

Advertisement

ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ತಮ್ಮ ಮನೆಗಳಿಗೆ ಖುಷಿಯಿಂದ ತೆರಳಿದರೆ ಅದೇ ನಮಗೆ ಖುಷಿಯ ವಿಚಾರವಾಗಲಿದೆ. ನೀವು ಸಂತೋಷವಾಗಿದ್ದರೆ ನಾವು ಸಂತೋಷದಿಂದ ಹಬ್ಬ ಆಚರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಯಾವುದೇ ಅವಘಡ ಹಾಗೂ ಅಪಾಯ ಎದುರಾದರೆ ಜಿಲ್ಲೆಗೆ ಕೆಟ್ಟ ಹೆಸರು. ಅದು ಸದಾ ನೆನಪಿನಲ್ಲಿ ಉಳಿಯುತ್ತದೆ. ಅದಕ್ಕೆ ಅವಕಾಶ ಕೊಡದೇ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಬೇಕು. ನಿಮ್ಮ ಒಳಿತಿಗೆ ಸರ್ಕಾರವು ಹಲವು ಕಾನೂನುಗಳನ್ನು ಜಾರಿ ತಂದಿದೆ. ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕು. ಕಾನೂನು ಪಾಲನೆ ಮಾಡಬೇಕು ಎಂದರು.

ಜನಸಂಖ್ಯೆ ಹೆಚ್ಚಿಸಿದಂತೆ ಪೊಲೀಸರನ್ನು ಹೆಚ್ಚಿಸಲು ಆಗುವುದಿಲ್ಲ. ಇರುವ ಪೊಲೀಸ್‌ ಭದ್ರತೆಯಲ್ಲೇ ಜನತೆಗೆ ರಕ್ಷಣೆ ಕೊಡಬೇಕು. ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಿ ಕೊನೆ ವರೆಗೂ ಸುರಕ್ಷಿತವಾಗಿ ವಿಸರ್ಜನೆ ಮಾಡಬೇಕು. ಮದ್ಯ ಸೇವಿಸಿ ಹಬ್ಬ ಆಚರಣೆ ಮಾಡುವುದು ತರವಲ್ಲ. ಅಶ್ಲೀಲವಾದ ನೃತ್ಯ ಮಾಡಬೇಡಿ. ಆ ರೀತಿ ವರ್ತನೆ ತೋರಿದರೆ ಯಾವುದೇ ಮಹಿಳೆ ಮೆರವಣಿಗೆ ವೀಕ್ಷಣೆಗೆ ಬರಲ್ಲ. 21ನೇ ದಿನಕ್ಕೆ ಗಣೇಶ ಮೂರ್ತಿ ವಿಸರ್ಜನೆಗೆ ಕೊನೆಯ ದಿನವಾಗಿದೆ. ಯಾರು ಮೊದಲು ಕಾನೂನು ಪಾಲನೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಾರೋ ಅವರಿಗೆ ಬಹುಮಾನ ನೀಡುತ್ತೇವೆ ಎಂದರು. ಎಸಿ ಸಿ.ಡಿ. ಗೀತಾ ಮಾತನಾಡಿದರು. ಡಿವೈಎಸ್‌ಪಿ ವೆಂಕಟಪ್ಪ ನಾಯಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next