Advertisement

ಸೌಹಾರ್ದದಿಂದ ಬಕ್ರೀದ್‌ ಹಬ್ಬ ಆಚರಿಸಿ

07:39 PM Jul 19, 2021 | Team Udayavani |

ಭಾಲ್ಕಿ: ದೇಶಾದ್ಯಂತ ಕೊರೊನಾ ಭೀತಿ ಆವರಿಸಿರುವುದರಿಂದ ಮುಸ್ಲಿಂರ ಎರಡನೇ ದೊಡ್ಡ ಧಾರ್ಮಿಕ ಹಬ್ಬ ಬಕ್ರೀದ್‌ನ್ನು ಸೌಹಾರ್ದ ಮತ್ತು ಶಾಂತಿಯಿಂದ ಆಚರಿಸಬೇಕು ಎಂದು ಸಿಪಿಐ ಟಿ.ಆರ್‌.ರಾಘವೇಂದ್ರ ಹೇಳಿದರು.

Advertisement

ನಗರ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ಹಬ್ಬದ ಕುರಿತು ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಾರ್ಥನಾ ಸ್ಥಳಗಳಲ್ಲಿ ಹೆಚ್ಚು ಜನರು ಸೇರಿದಂತೆ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ ಬಳಸಬೇಕು. ಪರಸ್ಪರ ಹಸ್ತಲಾಗವ ಹಾಗೂ ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವ ಬದಲು ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ ಮೋರೆ, ಮುಖಂಡರಾದ ಅಶೋಕ ಲೋಖಂಡೆ, ಸಲೀಂ ಇನಾಮದಾರ ಮಾತನಾಡಿದರು. ಪುರಸಭೆ ಸದಸ್ಯ ಅಶೋಕ ಗಾಯಕವಾಡ್‌ ಮತ್ತು ಪ್ರಮುಖರಾದ ಧನರಾಜ ಪಾಂಚಾಳ, ಕಪೀಲ ಕಲ್ಯಾಣೆ, ಸಂಗಮೇಶ ವಾಲೆ, ಪ್ರಕಾಶ ಭಾವಿಕಟ್ಟಿ, ರಫೀಕ್‌ ಚೌಧರಿ, ಸಲೀಮೋದಿನ್‌ ಚೌಧರಿ, ಅಹಮ್ಮದ ಪಾಶಾ, ಅರೀಫ್‌, ಸಂಜೀವ ಭಾವಕಟ್ಟಿ, ಪ್ರವೀಣ ಸಾವರೆ, ರಫೀಕ್‌ ಚೌಧರಿ, ಅಶೋಕ ಅಂಬಿಗಾರ, ಎಚ್‌ಸಿ ನಾಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next