ಹುನಗುಂದ: ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸಬೇಕು ಎಂದು ತಹಶೀಲ್ದಾರ್ ಸುಭಾಸ ಸಂಪಗಾವಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಂತಹ ಘಟನೆ ನಡೆದರೆ ಪೊಲೀಸರ ಗಮನಕ್ಕೆ ತರಬೇಕು ಎಂದರು.
ಸಿಪಿಐ ಸಂಜೀವ ಬಳಿಗಾರ ಮಾತನಾಡಿ, ಶಾಂತಿ ಮತ್ತು ಸೌಹಾರ್ದದಿಮದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಆಚರಿಸುವ ವೇಳೆ ಸಣ್ಣ ಘಟನೆಗಳು ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು. ಅದರ ಮುಂಜಾಗ್ರತ ಕ್ರಮವಾಗಿ ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು.
ಮುಕ್ತಾರ ಲೈನ್, ಪುಂಡಲಿಕ ಪಟಾತರ, ಮುಖಂಡರಾದ ಶಿವಾನಂದ ಕಂಠಿ, ಅರುಣೋದಯ ದುದ್ಗಿ, ಮಹಾಂತಪ್ಪ ವಾಲೀಕಾರ, ವಿನೋದ ಕುಂಬಾರ, ಮಹಿಬೂಬ ಸರಕಾವಸ, ಯಾಸೀನ ಗಡೇದ, ಮಹಮ್ಮದ್ ಗಡವಾಲ, ಇರ್ಫಾನ್ ಮಕಾಂದರ, ಮೈನು ಧನ್ನೂರ, ಮುನ್ನಾ ಖಾಜಿ, ವಾಸೀಮ್ ನಡುವಿನಮನಿ, ಆದೀಲ್ ನಾಯಕ, ಶಬ್ಬೀರ ಮೌಲ್ವಿ ಉಪಸ್ಥಿತರಿದ್ದರು.