Advertisement
ದೀಪಗಳ ಉತ್ಸವ, ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿ ಭಾರತದ ಅತಿ ದೊಡ್ಡ ಹಬ್ಬವಾಗಿದೆ. ಸಮೃದ್ಧತೆ ಮತ್ತು ಕುಟುಂಬದ ಒಗ್ಗೂಡುಕೆಯ ಒಂದು ವಿಭಿನ್ನ ಸನ್ನಿವೇಶ. ಈ ಹಬ್ಬವನ್ನು ಸಂಭ್ರಮದಿಂದ ವಿಭಿನ್ನವಾಗಿ ಆಚರಿಸಲು ಕೊನೆ ಕ್ಷಣದ ಸಿದ್ಧತೆಗಳು ನಡೆಯುತ್ತಿವೆ. ಮನೆಗಳು ದೀಪಗಳಿಂದ ಅಲಂಕೃತಗೊಳ್ಳಲು ಅಣಿಯಾಗುತ್ತಿದ್ದರೆ ಮಾರುಕಟ್ಟೆಗಳು ಬಿರುಸಿನ ವ್ಯಾಪಾರಕ್ಕೆ ಸಿದ್ಧವಾಗಿವೆ.
ಹಬ್ಬಗಳು ಬಂದರೇ ಆನ್‌ಲೈನ್ ಶಾಂಪಿಂಗ್ ಸೈಟ್‌ಗಳು ಗ್ರಾಹಕರನ್ನು ಸೆಳೆಯಲು ಬೆಸ್ಟ್ ಡೀಲ್‌ಗಳನ್ನು ಘೋಷಿಸುತ್ತವೆ ಹಾಗೂ ಹಬ್ಬದ ಸೇಲ್ ಮೇಳದಲ್ಲಿ ಗ್ಯಾಜೆಟ್ಸ್ ಉತ್ಪನ್ನಗಳಿಗೆ ವಿಶೇಷ ರಿಯಾಯತಿ ನೀಡುತ್ತವೆ. ಹೀಗಾಗಿಯೇ ಗ್ಯಾಜೆಟ್ ಖರೀದಿಸುವ ಬಹುತೇಕ ಗ್ರಾಹಕರು ಇ-ಕಾಮರ್ಸ್‌ಗಳ ಆಫರ್ ದಿನಗಳನ್ನು ಕಾಯುತ್ತಿರುತ್ತಾರೆ. ಹಾಗೇನಾದರೂ ಈಗಾಗಲೇ ಚಾಲ್ತಿಯಲ್ಲಿರುವ ಈ ಹಬ್ಬದ ಸೇಲ್ ಮೇಳಗಳಲ್ಲಿ ಸ್ಮಾಟ್‌ಫೋನ್, ಆಡಿಯೊ ಡಿವೈಸ್ ಮತ್ತು ಸ್ಮಾರ್ಟ್ ಪ್ರೊಡೆಕ್ಟ್ಗಳಿಗೆ ಬೆಸ್ಟ್ ಡೀಲ್ ಲಭ್ಯವಿವೆ.
Related Articles
ಹಬ್ಬಗಳ ಸಮಯದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನೀಡಲು ಎಲ್ಲರೂ ಬಯಸುತ್ತಾರೆ. ದೀಪಾವಳಿ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ವಿಭಿನ್ನ ಉಡುಗೊರೆಗಳು ಬಂದಿವೆ. ಸುಂದರವಾದ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿರುವ ಸಿಹಿ-ತಿಂಡಿ, ಚಾಕೋಲೇಟ್‌ಗಳು, ಗ್ರೀಟಿಂಗ್ಸ್ ಗಳು, ಶೋ ಪೀಸ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.
Advertisement
ಸಾಂಪ್ರಾದಾಯಿಕ ಉಡುಗೆಗಳಿಗೆ ಆದ್ಯತೆಹಬ್ಬದ ಸಮಯದಲ್ಲಿ ಯುವಕ- ಯುವತಿಯರು ಸಾಂಪ್ರದಾಯಿಕ ಉಡುಗೆಗಳತ್ತ ವಾಲುತ್ತಾರೆ. ಮಹಿಳೆಯರು ಆಕರ್ಷಕ ಸೀರೆಗಳತ್ತ ಮನಸ್ಸು ಮಾಡಿದರೆ ಯುವತಿಯರು ಮಾಡರ್ನ್ ಸೀರೆ, ಕುರ್ತಾಗಳನ್ನೇ ಧರಿಸುತ್ತಾರೆ. ಯುವಕರು ಕೂಡ ಕುರ್ತಾ, ಶರ್ವಾನಿಗಳನನ್ನು ತೊಟ್ಟು ಸಂಭ್ರಮಿಸುತ್ತಾರೆ. ಹಬ್ಬಕ್ಕಾಗಿಯೇ ಬಟ್ಟೆ ಮಳಿಗೆ, ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಆಫರ್‌ಗಳ ಸುರಿಮಳೆ ಇದೆ. ಆನ್‌ಲೈನ್ ಶಾಪಿಂಗ್ ಮಾಡುವಾಗ ಬಟ್ಟೆಗಳ ಮೆಟಿರೀಯಲ್‌ಗಳ ಬಗ್ಗೆ ಎಚ್ಚರವಿರಲಿ. ಪರಿಸರಕ್ಕೆ ಹಾನಿ ಮಾಡದಿರಲಿ ಪಟಾಕಿ
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳದ್ದೇ ಸದ್ದು. ಹಬ್ಬದ ಸಮಯದಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯ ಮತ್ತು ಘನ ತ್ಯಾಜ್ಯವು ಉತ್ಪತ್ತಿಯಾಗುವುದು ಸಾಮಾನ್ಯವಾಗಿರುತ್ತದೆ. ಹಾಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಧ್ಯವಾದ್ದಷ್ಟು ಕಡಿಮೆ ಪಟಾಕಿಗಳನ್ನು ಬಳಸಬೇಕು. ಸಾರ್ವಜನಿಕರು ಪಟಾಕಿಗಳನ್ನು ಖರೀದಿಸುವ ಮುನ್ನ ಗುಣಮಟ್ಟ ಖಾತರಿ ಮಾಡಿಕೊಳ್ಳಬೇಕು ಹಾಗೂ ಹಬ್ಬದ ಆಚರಣೆಯಲ್ಲಿ ಬೆಳಕು ಪ್ರಧಾನವಾಗಿರಲಿ. ಪಟಾಕಿಗಳನ್ನು ಅದಷ್ಟು ದೂರವಿಟ್ಟು ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸಿ. ಸಿಹಿತಿಂಡಿಗಳ ಬಾಕ್ಸ್‌ಗಳೇ ಪ್ರಮುಖ ಆಕರ್ಷಣೆ
ದೀಪಾವಳಿಯಂದು ಸಿಹಿತಿಂಡಿಗಳ ವಿನಿಮಯವೂ ಪ್ರಮುಖ ವಿಚಾರ. ನೆರೆಹೊರೆಯವರು, ಸಂಬಂಧಿಕರು, ಪ್ರೀತಿಪಾತ್ರರಿಗೆ ಸಿಹಿತಿಂಡಿಗಳನ್ನು ಕಳುಹಿಸಿ ಶುಭಾಶಯ ಕೋರುವುದು ಮಾಮೂಲಿ. ಅದರಂತೆ ದೀಪಾವಳಿಗಾಗಿ ಸುಂದರ ಆಕರ್ಷಕ ಬಾಕ್ಸ್‌ಗಳಲ್ಲಿ ಸಿಹಿ, ತಿಂಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಿಹಿ, ತಿಂಡಿಗಳಿಗಿಂತಲೂ ಅದನ್ನು ಕಳುಹಿಸುವ ಬಾಕ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚು ಆಸಕ್ತಿ
ದೀಪಾವಳಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಅದರಲ್ಲೂ ಪೇಪರ್ ಗೂಡುದೀಪಗಳಿಗೆ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
– ರವಿ ಶಂಕರ್, ಗೂಡುದೀಪ ವ್ಯಾಪಾರಿ - ಪ್ರಜ್ಞಾ ಶೆಟ್ಟಿ