Advertisement

ಸಿ.ಡಿ ರಾಜಕಾರಣ ರಾಜ್ಯಕ್ಕೆ ಕಳಂಕ: ಕೆಎಸ್ ಈಶ್ವರಪ್ಪ

02:57 PM Feb 02, 2023 | Team Udayavani |

ಶಿವಮೊಗ್ಗ: ಸಿ.ಡಿ ರಾಜಕಾರಣ ರಾಜ್ಯಕ್ಕೆ ಕಳಂಕ. ಹಿಂದೆಯಿಂದ ನಡೆದುಕೊಂಡ ಬಂದ ಕೆಟ್ಟ ಪದ್ಧತಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ತಮ್ಮ ಬಳಿ ಡಿಕೆ ಶಿವಕುಮಾರ್ ಸೇರಿದಂತೆ ಇತರರ ಅನೇಕ ಸಿಡಿ ಇದೆಯೆಂದು ಹೇಳಿದ್ಥಾರೆ. ಈಗಾಗಲೇ ರಮೇಶ್ ಸಿಬಿಐ ತನಿಖೆ ಅಗಬೇಕೆಂದು ಒತ್ತಾಯಿಸಿದ್ದಾರೆ. ಸಿಎಂ ಗೆ ನಾನು ಕೂಡಾ ಮನವಿ ಮಾಡುತ್ತೇನೆ. ಇಂತಹ ದುಷ್ಕೃತ್ಯ ರಾಜ್ಯದಲ್ಲಿ ನಡೆಬಾರದು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ತಪ್ಟಿತಸ್ಥರೆಂದು ತೀರ್ಮಾನವಾಗಲು ಸಿಬಿಐ ತನಿಖೆ ಆಗಬೇಕು ಒತ್ತಾಯ ಮಾಡಿದರು.

ಇದನ್ನೂ ಓದಿ:‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಅತ್ಯುತ್ತಮ  ಬಜೆಟ್ ಮಂಡನೆ ಮಾಡಲಾಗಿದೆ. ಬಿಜೆಪಿ ವಿರೋಧಿಗಳು ಸಂತೋಷ ಪಡುವ ರೀತಿಯಲ್ಲಿ ವಿತ್ತ ಸಚಿವರು ಬಜೆಟ್ ಮಂಡಿಸಿದ್ದಾರೆ. ಎಲ್ಲ ವರ್ಗದವರಿಗೂ ಅನುಕೂಲ ಆಗುವಂತಹ ಬಜೆಟ್ ಆಗಿದೆ. ಶ್ರೀಮಂತರಿಂದ ಟ್ಯಾಕ್ಸ್  ಪಡೆದು ಅದನ್ನು ಬಡವರಿಗೆ ನೀಡುವ ವ್ಯವಸ್ಥೆ ಬಜೆಟ್ ನಲ್ಲಿ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5.300 ಕೋಟಿ ನೀಡಿದೆ. ಇದರಿಂದ ಮದ್ಯ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next