Advertisement
ಸಿ.ಡಿ.ಗಳ ಸಹಿತ ಸದನಕ್ಕೆ ಬಂದ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದ್ದರಿಂದ ಗದ್ದಲ-ಕೋಲಾಹಲ ಉಂಟಾಯಿತು. ಸದನ ಮುಂದೂಡಿ ಆಡಳಿತ ಮತ್ತು ವಿಕಪ್ಷ ನಾಯಕರ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಡೆಸಿದ ಸಂಧಾನ ಸಭೆಯೂ ಫಲ ನೀಡಲಿಲ್ಲ.
ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಬುಧವಾರವೂ ಇದೇ ಪರಿಸ್ಥಿತಿ ಮುಂದು ವರಿಯುವ ಸಾಧ್ಯತೆಯಿದ್ದು, ಅಹೋ ರಾತ್ರಿ ಧರಣಿ ಬಗ್ಗೆಯೂ ಕಾಂಗ್ರೆಸ್ ಚರ್ಚಿಸುತ್ತಿದೆ. ವಿಪಕ್ಷ ಕಲಾಪ ನಡೆಸಲು ಅವಕಾಶ ಕೊಡದಿದ್ದರೆ ಬುಧವಾರಕ್ಕೆ ಅಧಿವೇಶನ ಮೊಟಕು ಗೊಳ್ಳುವ ಸಾಧ್ಯತೆಯೂ ಇದೆ. ಸಿದ್ದರಾಮಯ್ಯ ಆಗ್ರಹ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಮನ ಜಪ ಮಾಡುವ ಬಿಜೆಪಿಯವರು ಹೆಣ್ಣಿಗೆ ಅನ್ಯಾಯ ಮಾಡುತ್ತಿದ್ದಾರೆ. ಯುವತಿಗೆ ನ್ಯಾಯ ಸಿಗಬೇಕು. ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. 6 ಸಚಿವರು ರಾಜೀನಾಮೆ ನೀಡಬೇಕು. ಹೈಕೋರ್ಟ್‌ನ ಹಾಲಿ ಮು. ನ್ಯಾ.ಮೂರ್ತಿ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
Related Articles
ಸಿ.ಡಿ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿಯು ಸಿ.ಡಿ. ಯುವತಿ, ಪ್ರಕರಣದ ಆರೋಪಿಗಳಿಗೆ ಆರ್ಥಿಕ ನೆರವು ನೀಡಿದ ಗ್ರ್ಯಾನೈಟ್ ಉದ್ಯಮಿ ಶಿವಕುಮಾರ್ ಮತ್ತು ಅವರ ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದೆ. ಯುವತಿಗೆ ಐದನೇ ಬಾರಿ ನೋಟಿಸ್ ಕಳುಹಿಸಿದೆ. ವಿಚಾರಣೆಗೆ ಬರಲು ಭದ್ರತೆ ವ್ಯವಸ್ಥೆ ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
Advertisement