Advertisement
ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಪತ್ರಕರ್ತ ನರೇಶ್ ಡ, ಶ್ರವಣ್, ಸಿಡಿ ಪ್ರಕರಣದ ಯುವತಿ, ಉದ್ಯಮಿ ಶಿವಕುಮಾರ್, ಕಾರು ಚಾಲಕ ನಾಪತ್ತೆಯಾಗಿದ್ದಾರೆ. ಈ ಪೈಕಿ ಶ್ರವಣ್ ತಾಂತ್ರಿಕ ಪರಿಣಿತ . ಕೆಲವು ಆ್ಯಪ್‌ಗಳು, ಸಾಫ್ಟ್ವೇರ್ ಗಳನ್ನು ಬಳಸಿ ಲೊಕೇಶನ್ ಗಳನ್ನೇ ಹ್ಯಾಕ್ ಮಾಡಿ ಉತ್ತರ ಭಾರತದ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಬೆನ್ನು ಬಿದ್ದಿರುವ ಎಸ್‌ಐಟಿ ಅಧಿಕಾರಿಗಳ ದಿಕ್ಕುತಪ್ಪಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಎಸ್‌ಐಟಿಯ ಕೆಲವು ಅಧಿಕಾರಿಗಳಿಗೆ ನಿರಂತರವಾಗಿ ವಾಟ್ಸ್ ಆ್ಯಪ್ ಒಟಿಪಿ ಸಂದೇಶಗಳು ಬಂದಿವೆ. ಅನುಮಾನಗೊಂಡ ಅಧಿಕಾರಿಗಳು ಸೈಬರ್ ವಿಭಾಗದಲ್ಲಿ ಪರಿಶೀಲಿಸಿದಾಗ ಹ್ಯಾಕಿಂಗ್ ಒಟಿಪಿಗಳಾಗಿದ್ದು, ನಿರ್ದಿಷ್ಟ ವ್ಯಕ್ತಿಯೇ ಈ ರೀತಿ ಮಾಡುತ್ತಿದ್ದಾನೆ ಎಂಬುದು ಪತ್ತೆಯಾಗಿದೆ. ಅದರ ಜಾಡು ಹಿಡಿದಾಗ ಸಿಡಿ ಆರೋಪಿಗಳೇ ಈ ಕೃತ್ಯ ಎಸಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಐವರು ನಾಪತ್ತೆ
ಆರೋಪಿಗಳ ಬೆನ್ನುಬಿದ್ದ ಎಸ್‌ಐಟಿಗೆ ಮತ್ತೂಂದು ಸ್ಫೋಟಕ ವಿಚಾರ ತಿಳಿದುಬಂದಿದೆ. ಮಾ. 10ರಿಂದ 18ರ ವರೆಗೆ ನರೇಶ್ ಗೌಡ, ಶ್ರವಣ್, ಸಿಡಿ ಲೇಡಿ, ಉದ್ಯಮಿ ಶಿವಕುಮಾರ್, ಆತನ ಕಾರು ಚಾಲಕ ಒಟ್ಟಿಗೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೊಟೇಲ್, ಲಾಡ್ಜ್ ಗಳ ನೋಂದಣಿ ಪುಸ್ತಕದಲ್ಲಿ ಒಬ್ಬರ ಹೆಸರು ಬರೆದು +2, +5 ಎಂದು ನಮೂದಿಸಿದ್ದಾರೆ. ಅನಂತರ ಪ್ರತ್ಯೇಕವಾಗಿ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ನಕಲಿ ನಂಬರ್, ನಕಲಿ ಹೆಸರು!ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಾವು ತಂಗುವ ಹೊಟೇಲ್, ಲಾಡ್ಜ್ ಗಳು, ರೆಸಾರ್ಟ್‌ಗಳ ನೋಂದಣಿ ಪುಸ್ತಕದಲ್ಲಿ ಅಪರಿಚಿತರ ಹೆಸರು, ಮೊಬೈಲ್ ನಂಬರ್ ಗಳನ್ನು ಉಲ್ಲೇಖೀಸಿದ್ದಾರೆ. ಆರೋಪಿಗಳ ಲೊಕೇಷನ್ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಹೋಗುವ ಕೆಲ ಹೊತ್ತಿನಲ್ಲೇ ಸ್ಥಳದಲ್ಲಿ ಕಾಲ್ಕಿಳುತ್ತಿದ್ದಾರೆ. ಬಳಿಕ ಅಲ್ಲಿನ ಸಿಸಿ ಕೆಮರಾ ಶೋಧಿಸಿದಾಗ ಆರೋಪಿಗಳು ಓಡಾಡಿರುವ ದೃಶ್ಯ ಗಳು ಸೆರೆಯಾಗಿವೆ.