Advertisement

ಸ್ಥಾನ ದುರುಪಯೋಗ : ಗೂಗಲ್‌ಗೆ ಮತ್ತೊಮ್ಮೆ ದಂಡ

12:51 PM Oct 26, 2022 | Team Udayavani |

ನವದೆಹಲಿ: ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್‌ಗೆ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ) ಇದೀಗ ಮತ್ತೂಮ್ಮೆ ಅಂಥದ್ದೇ ಕಾರಣಕ್ಕಾಗಿ ದಂಡ ವಿಧಿಸಿದೆ.

Advertisement

ಪ್ಲೇ ಸ್ಟೋರ್‌ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್‌ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಸಿಸಿಐ, ಮಂಗಳವಾರ ಹೊಸದಾಗಿ 936.44 ಕೋಟಿ ರೂ. ದಂಡ ವಿಧಿಸಿದೆ. ಜತೆಗೆ ನ್ಯಾಯೋಚಿತವಲ್ಲದ ವ್ಯಾಪಾರಿ ಅಭ್ಯಾಸಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿದೆ. ಅಲ್ಲದೇ ನಿಗದಿತ ಕಾಲಾವಧಿ ಒಳಗೆ ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಆಂಡ್ರಾಯ್ಡ ಮೊಬೈಲ್‌ ಸಾಧನಗಳಿಗೆ ಸಂಬಂಧಿಸಿದಂತೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಗೂಗಲ್‌ಗೆ ಅ.20ರಂದು ಸಿಸಿಐ 1,337.76 ಕೋಟಿ ರೂ. ದಂಡ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next