ಬೆಂಗಳೂರು: ಇತ್ತೀಚೆಗಷ್ಟೆ ನಗರದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಅದರ ಮುಂದುವರಿದ ಭಾಗವಾಗಿ ಸೆ.16ರಂದು ಮತ್ತೆ 633 ಕಡೆ ದಾಳಿ ನಡೆಸಿದ್ದಾರೆ.
ಕೋಟ್ಪಾ ಕಾಯ್ದೆಯಡಿ 2,300 ಲಘು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರಿನ ನೈಟ್‌ಲೈಫ್ ವೇಳೆ ನಿಯಮ ಉಲ್ಲಂಘಿಸುವ ಪಬ್, ಡಿಸ್ಕೋಥೆಕ್, ಹುಕ್ಕಾಬಾರ್ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕಳೆದೆರಡು ವಾರದ ಹಿಂದೆಯಷ್ಟೆ ಬೆಂಗಳೂರಿನಲ್ಲಿ 500ಕ್ಕೂ ಅಧಿಕ ಪಬ್, ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿ ನಿಯಮ ಉಲ್ಲಂ ಸುತ್ತಿರುವ ಪಬ್ ಮಾಲೀಕರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದರು. ಆದರೆ, ಪಬ್ ಮಾಲೀಕರು ಮತ್ತೆ ಹಳೆ ಚಾಳಿ ಮುಂದುವರಿಸಿರುವುದು ಸಿಸಿಬಿ ಪೊಲೀಸರ ಗಮನಕ್ಕೆ ಬಂದ ಬೆನ್ನಲ್ಲೇ ದಾಳಿ ಮುಂದುವರಿಸಿ ಬಿಸಿ ಮುಟ್ಟಿಸಿದ್ದಾರೆ.
ನಿಯಮಗಳೇನು ?: ನಗರದಲ್ಲಿರುವ ಪಬ್, ಡಿಸ್ಕೋಥೆಕ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ಕಾಯ್ದೆಯಡಿಯಲ್ಲಿ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ಷರತ್ತುಗಳಿವೆ. ಈ ನಿಬಂಧನೆ ಉಲ್ಲಂಘಿಸಿ ಅವಧಿ ಮೀರಿ ತೆರೆದಿರುವುದು, 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವು ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸೆ.16ರಂದು ಬೆಂಗಳೂರು ನಗರಾದ್ಯಂತ ಕೋಟಾ³ ಕಾಯ್ದೆ, ಜೆ.ಜೆ.ಆಕ್ಟ್ ಹಾಗೂ ಅಬಕಾರಿ ಕಾಯ್ದೆ ಉಲ್ಲಂಘಿಸಿದ್ದ ಹೋಟೆಲ್‌ಗಳು, ಪಬ್, ಡಿಸ್ಕೋಥೆಕ್‌ಗಳು, ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಕೋಟ್ಪಾ ಕಾಯ್ದೆಯಡಿಯಲ್ಲಿ ದಂಡವನ್ನು ವಿಧಿಸಲಾಗಿದೆ.
ಪಬ್ ಮಾಲೀಕರಿಗೆ ಎಚ್ಚರಿಕೆ: ಕಾನೂನು ಅಡಿಯಲ್ಲಿ ನೀಡಿರುವ ಪರವಾನಗಿಯಲ್ಲಿರುವ ನಿಯಮ, ಷರತ್ತು, ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. 18 ವರ್ಷದ ಕೆಳಗಿರುವವರಿಗೆ ತಂಬಾಕು, ಸಿಗರೇಟು, ಮಾರಾಟ ಮಾಡಬಾರದು. 21 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು, 18 ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳ ಮಕ್ಕಳಿಗೆ ತಂಬಾಕು, ಸಿಗರೇಟನ್ನು ಹಾಗೂ ಮದ್ಯ ಮಾರಾಟ ಮಾಡಿದಲ್ಲಿ ಕಲಂ 77 ಜೆ.ಜೆ. ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
633 ಕಡೆಗಳಲ್ಲಿ ದಾಳಿ: 633 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. 131 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ರುವುದು ಗೊತ್ತಾಗಿದೆ. 3ಜೆಜೆ ಆಕ್ಟ್ ಅಡಿಯಲ್ಲಿ ದಾಖಲಿಸಲಾಗಿದೆ. 2 ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಕೊಳ್ಳಲಾಗಿದೆ. 126 ಕೋಟ್ಪಾ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 2,300 ಕೋಟ್ಪಾ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಲಘು ಪ್ರಕರಣಗಳಾಗಿವೆ. ಕಾರ್ಯಾಚರಣೆಯಲ್ಲಿ ನಗರದ 8 ವಿಭಾಗಗಳ ಉಪ ಪೊಲೀಸ್ ಆಯುಕ್ತರು, ಸಿಸಿಬಿ ಅಧಿಕಾರಿಗಳಿದ್ದರು. ನಿಯ ಮ ಉಲ್ಲಂ ಸಿರುವ ಹೋಟೆಲ್, ಪಬ್, ಡಿಸ್ಕೋಥೆಕ್‌ಗಳ ವಿರುದ್ಧ ಈ ರೀತಿಯ ದಾಳಿ ಯು ಮುಂದುವರಿಯಲಿದ್ದು, ಪದೇ ಪದೆ ನಿಯಮ ಉಲ್ಲಂ ಸುವವರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಪೊಲೀಸರು ಚಿಂತಿಸಿದ್ದಾರೆ.