Advertisement

CCB POLICE: ನಿದ್ದೆ ಮಂಪರಿನಲ್ಲಿದ್ದ ರೌಡಿಗಳಿಗೆ ಸಿಸಿಬಿ ಬಿಸಿ

10:14 AM Nov 09, 2023 | Team Udayavani |

ಬೆಂಗಳೂರು: ನಿದ್ದೆ ಮಂಪರಿನಲ್ಲಿದ್ದ ರೌಡಿಶೀಟರ್‌ಗಳಿಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

Advertisement

ರೌಡಿಶೀಟರ್‌ಗಳಾದ ರಮೇಶ್‌, ಜಗದೀಶ್‌ ಅಲಿಯಾಸ್‌ ಟಾಮಿ ಸೇರಿ 20ಕ್ಕೂ ಅಧಿಕ ರೌಡಿ ಶೀಟರ್‌ಗಳ ಮನೆಗಳ ಮೇಲೆ ಬುಧವಾರ ಮುಂಜಾನೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ವಾರೆಂಟ್‌ ಜಾರಿಯಾಗಿ ದ್ದರೂ ಕೆಲ ರೌಡಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡು ತ್ತಿದ್ದರು. ಈ ಬಗ್ಗೆ ಕೋರ್ಟ್‌ ಪೊಲೀಸರಿಗೆ ಎಚ್ಚರಿಕೆ ನೀಡಿತ್ತು. ‌

ಹೀಗಾಗಿ ಬುಧವಾರ ಸಿಸಿಬಿ ಪೊಲೀಸರು ನಗರದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ,ವೈಟ್‌ಪೀಲ್ಡ್, ಆಗ್ನೇಯ ಹಾಗೂ ಈಶಾನ್ಯ ವಿಭಾಗದಲ್ಲಿ ಏಕಕಾಲಕ್ಕೆ 20 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳು ಹಾಗೂ ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೆಲ ರೌಡಿಗಳ ಮನೆಯಲ್ಲಿ ಚೆಕ್‌, ಸಹಿ ಛಾಪಾ ಕಾಗದಗಳು ಪತ್ತೆಯಾಗಿವೆ. ಅಲ್ಲದೇ ರೌಡಿಗಳು ಬಡ್ಡಿ ಮತ್ತು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವುದು ಸಹ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next