Advertisement
ರಾಜ್ಯ ರಾಜಧಾನಿಯ ಬಹುತೇಕ ಪಬ್, ಹುಕ್ಕಾಬಾರ್‌ಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪು ಹೋಗಿ ತಡರಾತ್ರಿವರೆಗೆ ಮದ್ಯ, ಡ್ರಗ್ಸ್, ಧೂಮಪಾನ ಮಾಡುತ್ತಿರುವ ಬಗ್ಗೆ ಕೆಲ ಕಾಲೇಜಿನ ಮುಖ್ಯಸ್ಥರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ಗೆ ಇತ್ತೀಚೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಶುಕ್ರವಾರ ಸಂಜೆ 7 ಗಂಟೆ ಬಳಿಕ ನಗರದಲ್ಲಿರುವ 500ಕ್ಕೂ ಹೆಚ್ಚು ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹುಕ್ಕಾಬಾರ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಹಲವು ಪಬ್‌ಗಳಲ್ಲಿ ಅಪ್ರಾಪ್ತರು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ.
Related Articles
Advertisement
ಕೋಟ್ಪಾ ಕಾಯ್ದೆಯಡಿಯಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ ಕಲ್ಪಿಸಿ, ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ. ಅಪ್ರಾಪ್ತರಿಗೆ ಅಲ್ಲಿ ಅವಕಾಶ ಕಲ್ಪಿಸಬಾರದು. ಅಲ್ಲಿಗೆ ಮದ್ಯಪಾನ ಅಥವಾ ಊಟ ತಿಂಡಿ ಸರಬರಾಜು ಮಾಡಬಾರದು ಎಂಬ ಕೆಲವೊಂದು ನಿಯಮಗಳಿವೆ. ಬಹಳಷ್ಟು ಕಡೆಗಳಲ್ಲಿ ಈ ನಿಯಮ ಉಲ್ಲಂ ಸಿರುವುದು ಪತ್ತೆಯಾಗಿದ್ದು, ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ. ಅಪ್ರಾಪ್ತ ಮಕ್ಕಳಿಗೆ ಧೂಮಪಾನ, ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಕಡೆಗಳಲ್ಲಿ ಪಬ್, ರೆಸ್ಟೋರೆಂಟ್, ಕೆಫೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಅಬಕಾರಿ ಕಾಯಿದೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿದ್ದೇವೆ.
ಎಲ್ಲೆಲ್ಲಿ ದಾಳಿ?: ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಹೆಣ್ಣೂರು ಆಸುಪಾಸಿನಲ್ಲೇ ಬಹುತೇಕ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹುಕ್ಕಾಬಾರ್‌ಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲೇ ಹೆಚ್ಚಿನ ದಾಳಿ ನಡೆದಿದೆ.