Advertisement

ಸಿಸಿಬಿ ಆಪರೇಶನ್‌ “ಯಾಬಾ’ಡ್ರಗ್ಸ್‌ ವಶ

01:00 AM Jun 16, 2019 | Team Udayavani |

ಬೆಂಗಳೂರು: ಮಯನ್ಮಾರ್‌ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ “ಯಾಬಾ’ ಹೆಸರಿನ ಡ್ರಗ್ಸ್‌ ಮಾತ್ರೆಗಳು ಬೆಂಗಳೂರಿನಲ್ಲಿಯೂ ಮಾರಾಟವಾಗುತ್ತಿರುವ ಸಂಗತಿ ಬಯಲಾಗಿದೆ.

Advertisement

ಪಶ್ಚಿಮ ಬಂಗಾಳದಿಂದ “ಯಾಬಾ’ ಮಾತ್ರೆಗಳನ್ನು ರೈಲುಪ್ರಯಾಣದ ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ “ಯಾಬಾ’ ಮಾತ್ರೆಗಳನ್ನು ಜಪ್ತಿ ಮಾಡುವಲ್ಲಿ ಕೇಂದ್ರ ಅಪರಾಧ ಘಟಕ (ಸಿಸಿಬಿ)ಪೊಲೀಸರು ಯಶಸ್ವಿಯಾಗಿದ್ದಾರೆ. ಜಹಂಗೀರ್‌ (27) ಬಂಧಿತ ಆರೋಪಿ.

ಆರೋಪಿ ಜಹಂಗೀರ್‌ ಯಾಬಾ ಮಾತ್ರೆ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಹಿಳೆ ಮತ್ತು ಮಾದಕ ವಸ್ತು ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ (ಎಸಿಪಿ)ಶೋಭಾ ಎಸ್‌ ಕಟಾವ್ಕರ್‌ , ಇನ್ಸ್‌ಪೆಕ್ಟರ್‌ ಕೆ. ನಾರಾಯಣಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ.

ಒಂದು ಮಾತ್ರೆಗೆ 600-800 ರೂ.: ಮೂಲತಃ ಪಶ್ಚಿಮ ಬಂಗಾಳದ 12 ಪರಗಣ ಜಿಲ್ಲೆಯ ಜಹಂಗೀರ್‌ ಪರಪ್ಪನ ಅಗ್ರಹಾರದ ಈಶ್ವರಪ್ಪ ರೆಡ್ಡಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಈ ಹಿಂದೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಆರು ತಿಂಗಳಿನಿಂದ “ಯಾಬಾ’ಡ್ರಗ್ಸ್‌ ಮಾತ್ರೆ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದಾನೆ.

ರೈಲು ಪ್ರಯಾಣದ ಮೂಲದ ಪಶ್ಚಿಮ ಬಂಗಾಳದಿಂದ ಮಾತ್ರೆಗಳನ್ನು ತರಿಸಿಕೊಂಡು ಪರಿಚಯಸ್ಥ ಗ್ರಾಹಕರಿಗೆ ಒಂದು ಮಾತ್ರೆಗೆ 600 ರಿಂದ 800 ರೂ.ಗಳವರೆಗೆ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಪಶ್ಚಿಮ ಬಂಗಾಳದವರಿಗೆ ಹೆಚ್ಚು ಮಾರಾಟ: “ಯಾಬಾ’ ಮಾತ್ರೆ ಮಯನ್ಮಾರ್‌ ಹಾಗೂ ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತದೆ. ಅಲ್ಲಿಂದ ಡೀಲರ್‌ಗಳ ಮೂಲಕ ಪಶ್ಚಿಮಬಂಗಾಳಕ್ಕೆ ತಲುಪುತ್ತದೆ. ಅಲ್ಲಿಂದ ತರಿಸಿಕೊಳ್ಳುವ ಆರೋಪಿ ಜಹಂಗೀರ್‌, ಪರಿಚಯಸ್ಥ ಪಶ್ಚಿಮಬಂಗಾಳ ಗ್ರಾಹಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.

ಗ್ರಾಹಕರು ಮೊದಲೇ ಬುಕ್‌ ಮಾಡಿದರೆ. ಅವರಿಗೆ ತಲುಪಿಸುತ್ತಿದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದು, ಈತನ ಜತೆ ಜಾಲದಲ್ಲಿ ತೊಡಗಿಸಿಕೊಂಡಿದ್ದವರ ಬಂಧನಕ್ಕೆ ಕ್ರಮವಹಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next