ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರಾಗಿ ನಡೆಸಲಾಗುತ್ತಿದ್ದ 7 ಹುಕ್ಕಾ ಬಾರ್ ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 9 ಮಂದಿಯನ್ನು ಬಂಧಿಸಿ 73,870 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಕ್ಷಮ ಪ್ರಾಧಿಕಾರಗಳಿಂದ ಲೈಸೆನ್ಸ್ ಪಡೆಯದೆ, ನಿಯಮಾವಳಿಗಳನ್ನು ಉಲ್ಲಂ ಸಿ ಕಾಲೇಜು ವಿದ್ಯಾರ್ಥಿಗಳಿಗೆ ಹುಕ್ಕಾ ಸೇವೆನೆಗೆ ಅವಕಾಶ ಮಾಡಿಕೊಟ್ಟಿದ್ದ ಮಾಹಿತಿ ಮೇರೆಗೆ ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿಯ ವಿಶೇಷ ತಂಡಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕಬ್ಬನ್‌ಪಾರ್ಕ್‌ನ ಅಲ್ಲಾವುದೀನ್ ಕೆಫೆ ಮೇಲೆ ದಾಳಿ ನಡೆಸಿ ಮಾಲೀಕರಾದ ನೂರುವುಲ್ಲಾ ಸದ್ದಾಂ ಮತ್ತು ಮೊಹಮ್ಮದ್ ಕೋನೆನ್‌ರನ್ನು ಬಂಧಿಸಿದ್ದು, 1830 ರೂ. ನಗದು 3ಹುಕ್ಕಾ ಪೈಪ್ 3 ಹುಕ್ಕಾ ಸ್ಟಾಂಡ್‌ಗಳು, ಅದೇ ರೀತಿ ಅಜರ್ ಕೆಫೆಯಲ್ಲಿ ಹಸನ್ ಹಾಗೂ ಅಶ್ರಪ್ ಎಂಬುವವರನ್ನು ಬಂಧಿಸಿ 50,890 ರೂ. ಹಣ ಹಾಗೂ ಹುಕ್ಕಾ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋರಮಂಗಲದ ಅರೇಬಿಸಿ ಕ್ಯೂ ಕೆಫೆ ಹುಕ್ಕಾ ಬಾರ್‌ನ ದಾಳಿಯ ವೇಳೆ ಮ್ಯಾನೇಜರ್ ಅರುಣ್ ಎಂಬಾತನನ್ನು ಬಂಧಿಸಿ 19,500 ರೂ, 23 ಹುಕ್ಕಾ ಪಾಟ್, 29 ಪ್ಲೇವರ್, 500 ಫಿಲ್ಟರ್, 15 ಹುಕ್ಕಾ ಪೈಪ್‌ಗ್ಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲ ಠಾಣಾ ವ್ಯಾಪ್ತಿಯ ಎನ್‌ಟ್ರೋಪಿ ಕೆಫೆ ಸಿಬ್ಬಂದಿ ಸರ್ಜಯ್ ಸರ್ಕಾರ್ ಬಂಧನ 1,650, ರೂ. ಹಣ 7 ಹುಕ್ಕಾ ಪಾಟ್, 04 ಪ್ಲೇವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಸುಬ್ರಮಣ್ಯನಗರದ ಐ ಅಲ್ಟ್ರಾ ಲಾಂಚ್‌ನ ಸಿಬ್ಬಂದಿ ಪ್ರಶಾಂತ್ ನಂದ ಬಂಧನ ಹಾಗೂ ಹುಕ್ಕಾ ಪರಿಕರಗಳ ಜಪ್ತಿ, ಎಚ್‌ಎಸ್‌ಆರ್ ಲೇಔಟ್‌ನ ಕೆನೋಪಿ ಫ್ಲೇವರ್ ದಾಳಿಯಲ್ಲಿ ವಿನಯ್ ಎಂಬಾತನನ್ನು ಬಂಧಿಸಿ 5,200 ರೂ ಹಾಗೂ ಹುಕ್ಕಾ ಪರಿಕರಗಳು, ಬಾಣಸವಾಡಿಯ 18 ಐಸ್ ಕೆಫೆಯ ದಾಳಿಯಲ್ಲಿ ಕೆಫೆಯ ಮಾಲೀಕರಾದ ಕಾರ್ತಿಕ್‌ನನ್ನು ಬಂಧಿಸಿ 4 ಹುಕ್ಕಾ ಪಾಟ್ ಮತ್ತು 4 ಫ್ಲೇವರ್ ವಶಕ್ಕೆ ಪಡೆಯಲಾಗಿದೆ. ಆಯಾ ವಿಭಾಗದ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.