Advertisement

ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

03:59 PM Jan 20, 2020 | Suhan S |

ಶಿರಹಟ್ಟಿ: ಶಿರಹಟ್ಟಿ ಮತ ಕ್ಷೇತ್ರದಾದ್ಯಂತವಾಗಿ ಅತಿವೃಷ್ಟಿಯಿಂದಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸುವುದ ಅವಶ್ಯವಿದ್ದು, ಈಗಾಗಲೇ ಮುಂಡರಗಿ ಮತ್ತು ಲಕ್ಷ್ಮೇಶ್ವರ ಭಾಗದಲ್ಲಿನ ರಸ್ತೆಗಳ ಸುಧಾರಣೆಗಾಗಿ ಅನುದಾನ ಬಿಡಗಡೆಯಾಗಿದೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ತಾಲೂಕಿನ ಕಡಕೋಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಕಡಕೋಳದಿಂದ 14.50 ಕಿ.ಮೀ ರಸ್ತೆ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಸ್ತೆಗಳ ಗುಣಮಟ್ಟವನ್ನು ಗುತ್ತಿಗೆದಾರರು ಕಾಯ್ದುಕೊಳ್ಳಬೇಕು. ಜೊತೆಗೆ ಕಡಕೋಳ ಗ್ರಾಮಸ್ಥರು ಗುತ್ತಿಗೆದಾರರಿಗೆ ಸಹಕಾರವನ್ನು ನೀಡಿದರೆ ಅವರು ಉತ್ತಮವಾದ ರಸ್ತೆಯನ್ನು ನಿರ್ಮಿಸಲು ಅನುಕೂಲವಾಗುತ್ತದೆ.ಕೃಷಿಕರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ತುಂಗಭದ್ರ ನದಿಯನ್ನು ಸಮರ್ಪಕವಾಗಿಬಳೆಕ ಮಾಡಿಕೊಳ್ಳಲು ಉತ್ತಮವಾದ ಯೋಜನೆಯನ್ನು ರೂಪಿಸಲುಕಾರ್ಯಪ್ರವೃತ್ತರಾಗಿದ್ದು, ಮುಂದಿನ ದಿನಮಾನದಲ್ಲಿ ಹಂತ ಹಂತವಾಗಿ ಅಬಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಗ್ರಾಪಂ ಅಧ್ಯಕ್ಷ ವಿರುಪಾಕ್ಷಪ್ಪ ಗೌಳಿ, ಅಂದಪ್ಪ ಕೋರಿ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ ಪೂಜಾರ, ಶರಣಪ್ಪ ಹೂಗಾರ, ಅಪ್ಪಣ್ಣ ಹರಿಜನ, ಶರಣಪ್ಪ ಹರ್ಲಾಪೂರ, ಮಹದೇವಪ್ಪ ಅಡವಿ ಅಧಿಕಾರಿಗಳಾದ ಎಚ್‌.ಬಿ. ಹೊಸಮನಿ, ಶಂಭು ಕಾಳಗಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next