ನರಗುಂದ(ಗದಗ): ಅತ್ಯಾಚಾರ ಹಾಗೂ ಬರ್ಬರವಾಗಿ ಹತ್ಯೆಗೀಡಾದ ಪಟ್ಟಣದ ದಲಿತ ಬಾಲಕಿಯ ಕುಟುಂಬಸ್ಥರಿಗೆ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ 4.12 ಲಕ್ಷ ರೂ. ಮೊತ್ತದ ಪರಿಹಾರ ಚೆಕ್ ವಿತರಿಸಿ, ಸಾಂತ್ವನ ಹೇಳಿದರು.
ಸಂತ್ರಸ್ತ ಬಾಲಕಿ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಒಟ್ಟು 8.25 ಲಕ್ಷ ರೂ. ಪರಿಹಾರ ದೊರೆಯಲಿದೆ. ಈ ಪೈಕಿ ಮೊದಲ ಹಂತದಲ್ಲಿ 4.12 ಲಕ್ಷ ರೂ. ಚೆಕ್ ನೀಡಲಾಗುತ್ತಿದೆ.
ಪರಿಹಾರದಿಂದ ಬಾಲಕಿಯನ್ನು ಕಳೆದುಕೊಂಡಿರುವ ಕುಟುಂಬದ ನೋವು ಭರಿಸಲಾಗದು. ಆದರೆ, ಕುಟುಂಬಕ್ಕೆ ನೆರವಾಗಲಿ ಎಂಬ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬಾರದು. ಸರಕಾರ ತಮ್ಮೊಂದಿಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಧೈರ್ಯ ತುಂಬಿದರು.
ಇದನ್ನೂ ಓದಿ:ಕೋವಿಡ್ ಪ್ರಕರಣ ತಡೆಗೆ ಸಹಕರಿಸಿ
ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಬಿಜೆಪಿ ಯುವ ಮುಖಂಡ ಉಮೇಶ್ ಗೌಡ ಪಾಟೀಲ, ಬೆಳಗಾವಿ ನಾಗರಿಕ ಹಕ್ಕುಗಳು ಜಾರಿ ನಿರ್ದೇಶನಾಲಯ ಡಿಎಸ್ಪಿ ಸತೀಶ್ ಚಿಟಗುಪ್ಪ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ಮತ್ತಿತರರು ಇದ್ದರು.