Advertisement
ರಾ.ಹೆ. 66ರ ಉಳ್ಳಾಲ ಸೇತುವೆಗೆ ಎರಡೂ ಬದಿ ಕಬ್ಬಿಣದ ತಂತಿ (ತಡೆ) ಬೇಲಿಯನ್ನು ನಿರ್ಮಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕಡೆ ಯಿಂದ ಪ್ರಯತ್ನ ನಡೆಯುತ್ತಿರುವಂತೆಯೇ ಇದನ್ನು ಲೋಕೋಪಯೋಗಿ ಇಲಾಖೆಯ ಮುಖಾಂತರ ಮಾಡಿಸಬ ಹುದೇ ಎಂದು ಶಾಸಕ ವೇದವ್ಯಾಸ ಕಾಮತ್ ಪರಿಶೀಲಿಸಿದ್ದರು. ಈ ಎರಡೂ ಸಂಸ್ಥೆಗಳಿಂದ ಶೀಘ್ರ ಆಗುವ ಸಾಧ್ಯತೆ ಇಲ್ಲದಿರುವುದನ್ನು ಮನಗಂಡ ಜಿಲ್ಲಾಡಳಿತ ಮುಡಾದ ಮೂಲಕ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.
Related Articles
Advertisement
6 ಮಂದಿ ಆತ್ಮಹತ್ಯೆ, ಇಬ್ಬರಿಂದ ಪ್ರಯತ್ನಸಿದ್ಧಾರ್ಥ ಆತ್ಮಹತ್ಯೆ ಬಳಿಕ 7 ತಿಂಗಳ ಅವಧಿಯಲ್ಲಿ ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಓರ್ವ ಯುವತಿ ಸೇರಿದಂತೆ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಫೆ. 16ರಂದು ಬಂಟ್ವಾಳದ ಶಂಭೂರಿನ ಗೋಪಾಲಕೃಷ್ಣ ರೈ (45) ಅವರು ಪುತ್ರ ನಮೀಶ್ ರೈ ಜತೆ ಆತ್ಮಹತ್ಯೆ ಮಾಡಿರುವುದೂ ಸೇರಿದೆ. ಇಬ್ಬರನ್ನು ರಕ್ಷಿಸಲಾಗಿದೆ. ಯೋಜನೆಯಲ್ಲಿ ಏನೇನಿದೆ?
ಉಳ್ಳಾಲ ಸೇತುವೆ 840 ಮೀ. ಉದ್ದವಿದ್ದು, ಎರಡೂ ದಿಕ್ಕುಗಳಲ್ಲಿ (ಉತ್ತರ ಮತ್ತು ದಕ್ಷಿಣ) 400 ಮೀ. ದೂರದ ವರೆಗಿನ ಚಿತ್ರವನ್ನು ಸೆರೆ ಹಿಡಿಯುವ ಸಾಮರ್ಥ್ಯ ಇರುವ ಹೈ ರೆಸೊಲ್ಯೂಶನ್ ಸಿಸಿ ಕೆಮರಾ, ಸೇತುವೆಯ ಎರಡೂ ಬದಿ ಎಲ್ ಶೇಪ್‌ನಲ್ಲಿ ಎತ್ತರಕ್ಕೆ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿ ಬೇಲಿ ನಿರ್ಮಾಣ ಈ ಯೋಜನೆಯಲ್ಲಿ ಸೇರಿದೆ. ಈ ಬೇಲಿ ಸೇತುವೆಯ ಎರಡೂ ದಿಕ್ಕುಗಳಲ್ಲಿ 100 ಮೀ. ಗಳಷ್ಟು ವಿಸ್ತರಿಸಿರುತ್ತದೆ. ಪೊಲೀಸರ ಸೂಚನೆಯಂತೆ ಹೈ ರೆಸೊಲ್ಯೂಶನ್ ಸಿ.ಸಿ. ಕೆಮರಾ ಅಳವಡಿಸಲು ನಿರ್ಧರಿಸಲಾಗಿದೆ. ಬೇಲಿ ನಿರ್ಮಾಣ ತುರ್ತಾಗಿ ಆಗಬೇಕಿದೆ
ಸೇತುವೆಗೆ ಸಿಸಿ ಕೆಮರಾ ಮತ್ತು ಬೇಲಿ ನಿರ್ಮಾಣ ತುರ್ತಾಗಿ ಆಗಬೇಕಾಗಿದೆ. ಎನ್‌ಎಚ್‌ಎಐ ಮತ್ತು ಪಿಡಬ್ಲ್ಯುಡಿ ಮೂಲಕ ಶೀಘ್ರ ಇದನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದ ಕಾರಣ ಮುಡಾದಿಂದ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಮುಡಾ ಸಭೆಯಲ್ಲಿ ಮಂಜೂರಾತಿ ನೀಡಿ ಬಳಿಕ ಟೆಂಡರ್ ಕರೆದು ಕಾಮಗಾರಿ ವಹಿಸಲಾಗುವುದು.
- ವೇದವ್ಯಾಸ ಕಾಮತ್, ಶಾಸಕರು - ಹಿಲರಿ ಕ್ರಾಸ್ತಾ