Advertisement
ಚಿಕ್ಕಪೇಟೆ ಉಪ ವಿಭಾಗದ ಉಪ್ಪಾರಪೇಟೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ, ಕಾಟನ್‌ಪೇಟೆ, ಚಾಮರಾಜಪೇಟೆ ಹಾಗೂ ಕೆಎಸ್‌ಆರ್‌ಟಿಸಿ ಹೊರ ಠಾಣೆಯ ವ್ಯಾಪ್ತಿಗೆ ಬರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ರೈಲು ನಿಲ್ದಾಣ, ಸಿಟಿ ಮಾರುಕಟ್ಟೆ, ಮಸೀದಿ, ಚರ್ಚ್‌ಗಳು, ಮಾಲ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ ಅಳವಡಿಸಿರುವ ಸಿಸಿಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ಇತರೆ ಭದ್ರತೆ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲಾಗಿದೆ.
Related Articles
Advertisement
ತೀವ್ರತೆ ಹೆಚ್ಚಿಸಿದ ಘಟನೆಗಳು: ಶ್ರೀಲಂಕಾದ ಕೊಲಂಬೋದಲ್ಲಿ ಸರಣಿ ಸ್ಫೋಟ ನಡೆಯುತ್ತಿದ್ದಂತೆ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿಯೇ ಮೆಜೆಸ್ಟಿಕ್ ಸುತ್ತಮುತ್ತ ಹೆಚ್ಚಿನ ಭದ್ರತೆ ಬಗ್ಗೆ ಸಭೆ ಕೂಡ ನಡೆಸಲಾಗಿತ್ತು. ಈ ಮಧ್ಯೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆಯಿಂದ ಭದ್ರತೆ ವಿಚಾರ ಇನ್ನಷ್ಟು ತೀವ್ರತೆ ಪಡೆದುಕೊಂಡಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಜಿದ್ ಖಾನ್ ಶಹನಾಯಿ ವಾದಕ: ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ನಡೆ ತೋರಿ ಪೊಲೀಸರಿಗೆ ಸಿಕ್ಕಿಬಿದ್ದ ರಾಜಸ್ಥಾನದ ಜುನ್‌ಜುನು ಜಿಲ್ಲೆಯ ಸಾಜಿದ್ ಖಾನ್, ಕೂಲಿ ಕಾರ್ಮಿಕ ಹಾಗೂ ಶಹನಾಯಿ ವಾದಕ ಎಂಬುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ರಾಜಸ್ತಾನದ ಜುನ್‌ಜುನು ಜಿಲ್ಲೆಯ ನಿರಾಧುಂಗ್ ಗ್ರಾಮಕ್ಕೆ ನಗರ ಪೊಲೀಸರ ತಂಡ ತೆರೆಳಿ ಆತನ ಪೂರ್ವಾಪರ ಪರಿಶೀಲನೆ ನಡೆಸಿದೆ. ಅಲ್ಲದೆ, ಆತ ವಿವಾಹ ಸಮಾರಂಭಗಳಲ್ಲಿ ಶಹನಾಯಿ ಬಾರಿಸುತ್ತಿದ್ದ. ಜತೆ ಕೂಲಿ ಕಾರ್ಮಿಕ ಕೂಡ. ಆತ ವಾಸಿಸುವ ಗ್ರಾಮದಲ್ಲಿ ಶೇ.80 ಮಂದಿ ಸೈನಿಕರು ಹಾಗೂ ಶಿಕ್ಷಕರಿದ್ದಾರೆ. ಆತನ ಪತ್ನಿ ಗೃಹಿಣಿಯಾಗಿದ್ದಾರೆ ಎಂದು ಹೇಳಿದರು.
ರಾಜಸ್ತಾನದ ಯಾವುದೇ ಪೊಲೀಸ್ ಠಾಣೆಯಲ್ಲಿ ಸಾಜಿದ್ ಖಾನ್ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಮೂರು ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ರಾಜಸ್ತಾನ ಮೂಲದ ಅಬ್ದುಲ್ ಎಂಬುವರ ಸಹಾಯದಿಂದ ರಂಜಾನ್ ಸಂದರ್ಭದಲ್ಲಿ ಬೆಂಗಳೂರಿಗೆ ಬಂದು ಸಾಜಿದ್ ಭಿಕ್ಷಾಟನೆ (ದಾನ ಪಡೆಯುವುದು) ಮಾಡುತ್ತಿದ್ದರು. ಅಲ್ಲದೆ, ಸಾಜಿದ್ ಖಾನ್‌ನ ಕೆಲ ಸಂಬಂಧಿಕರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ಮಾಹಿತಿ ನೀಡಿದರು.