ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ವಾರ್ಷಿಕ ಪರೀಕ್ಷೆಯನ್ನು ಆಪ್ಟಿಕಲ್ ಮಾರ್ಕ್ ರೀಡಿಂಗ್ (ಒಎಂಆರ್) ಮಾದರಿಯಲ್ಲಿ ನಡೆಸಲು ಮಂಡಳಿ ನಿರ್ಧರಿಸಿದೆ.
ಈ ಕುರಿತಂತೆ, ಎರಡು ಪ್ರಮುಖ ಸೂಚನೆಗಳನ್ನು ಸದ್ಯದಲ್ಲೇ ಪ್ರಕಟಿಸಲು ಮಂಡಳಿ ತೀರ್ಮಾನಿಸಿದೆ.
ಕಪ್ಪು ಬಣ್ಣದ ಶಾಯಿ ಕಡ್ಡಾಯ: ನಾಲ್ಕು ಉತ್ತರಗಳಲ್ಲಿ ಒಂದನ್ನು ಆರಿಸಿ, ಅದಕ್ಕೆ ಸಂಬಂಧಿಸಿದ ವೃತ್ತವನ್ನು ಶಾಯಿಯಿಂದ ತುಂಬಲು ಕಪ್ಪು ಪಾಯಿಂಟ್ ಪೆನ್ ಅನ್ನೇ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲು ಮಂಡಳಿ ತೀರ್ಮಾನಿಸಿದೆ.
ಇದನ್ನೂ ಓದಿ:ನಿಗದಿತ ಅವಧಿಗೇ ಶಬರಿಮಲೆ ಏರ್‌ಪೋರ್ಟ್ ಪೂರ್ಣ: ಕೇರಳ ಸಿಎಂ
ಉತ್ತರ ಬದಲಿಸಲು ಅವಕಾಶ: ಯಾವುದೇ ಪ್ರಶ್ನೆಗೆ ತಪ್ಪು ಉತ್ತರ ಗುರುತಿಸಿದರೆ ಅದನ್ನು ಮತ್ತೆ ಬದಲಾಯಿಸಲು ಮತ್ತೂಂದು ಅವಕಾಶವನ್ನು ಒಎಂಆರ್ ಶೀಟ್‌ನಲ್ಲೇ ನೀಡಲು ತೀರ್ಮಾನಿಸಲಾಗಿದೆ. ಹಾಗಾಗಿ, ಪ್ರತಿ ಪ್ರಶ್ನೆಗೆ ಪೂರಕವಾಗಿ ನೀಡಲಾಗುವ ನಾಲ್ಕು ಉತ್ತರಗಳ ವೃತ್ತಗಳ ಕೆಳಗೆ ಒಂದು ಸಾಲಿನಷ್ಟು ಖಾಲಿ ಜಾಗವನ್ನು ಬಿಟ್ಟಿರಲು ನಿರ್ಧರಿಸಲಾಗಿದ್ದು, ಅಲ್ಲಿ ಬದಲಿ ಉತ್ತರವನ್ನು ತುಂಬಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.