Advertisement

ಸಿಬಿಎಸ್‌ಇ: ಮೃತ ವಿದ್ಯಾರ್ಥಿಯ ಉತ್ತಮ ಸಾಧನೆ

05:30 AM May 08, 2019 | Team Udayavani |

ಹೊಸದಿಲ್ಲಿ: ಅಪರೂಪದ ಕಾಯಿಲೆಯಿಂದಾಗಿ, ಮಾರ್ಚ್‌ನಲ್ಲಿ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ದೆಹಲಿಯ ವಿದ್ಯಾರ್ಥಿ ವಿನಾಯಕ್‌ ಶ್ರೀಧರ್‌ ನಿಧನನಾಗಿದ್ದ.

Advertisement

ಇತ್ತೀಚೆಗೆ ಪ್ರಕಟ ಗೊಂಡ ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶದ ಪ್ರಕಾರ, ಆತ ಇಂಗ್ಲಿಷ್‌ನಲ್ಲಿ 100, ವಿಜ್ಞಾನದಲ್ಲಿ 96, ಸಂಸ್ಕೃತದಲ್ಲಿ 97 ಅಂಕ ಗಳಿಸಿದ್ದಾನೆ. ಇನ್ನೂ ಎರಡು ವಿಷಯಗಳ ಪರೀಕ್ಷೆ ಬರೆಯುವುದು ಬಾಕಿಯಿದ್ದಾಗಲೇ ಆತ ಇಹಲೋಕ ತ್ಯಜಿಸಿದ್ದ.

ವಂಶವಾಹಿ ಕಾಯಿಲೆಯಾದ ಡ್ಯುಶಿನ್‌ ಮಸ್ಕ್ಯಾಲರ್‌ ಡೈಸ್ಟ್ರೋಫಿಗೆ ತುತ್ತಾಗಿದ್ದ ಆತ, ದೇಹದ ಮಾಂಸಖಂಡ ಬಿಗುವಾಗಿದ್ದರಿಂದ ವ್ಹೀಲ್ ಚೇರ್‌ ಆಶ್ರಯಿಸಿದ್ದ. ಭೌತ ವಿಜ್ಞಾನಿ ದಿ| ಸ್ಟೀಫ‌ನ್‌ ಹಾಕಿನ್ಸ್‌ ಅವರನ್ನೇ ಮಾದರಿಯನ್ನಾಗಿ ಇಟ್ಟುಕೊಂಡಿದ್ದ ವಿನಾಯಕ್‌, 10ನೇ ತರಗತಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರ ಹೊಮ್ಮಬೇಕು, ಖಗೋಳ ವಿಜ್ಞಾನಿಯಾಗಬೇಕು ಎಂಬ ಕನಸುಗಳನ್ನು ಹೊಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next