Advertisement

ಖಾಸಗಿ ಶಾಲೆಗಳ ಶುಲ್ಕದ ವಿವರ ಕೇಳಿದ ಸಿಬಿಎಸ್‌ಇ

03:45 AM Jun 05, 2017 | Team Udayavani |

ನವದೆಹಲಿ: ಸುಖಾಸುಮ್ಮನೆ ಅತ್ಯಧಿಕ ಶುಲ್ಕ ಹಾಕುವ, ಬೇರೆ ಬೇರೆ ನೆಪ ಹೇಳಿ ಹೆಚ್ಚು ಹಣ ಕಿತ್ತುಕೊಳ್ಳುವಂಥ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂದಾಗಿದೆ. ಅದರಂತೆ, ತಮ್ಮ ತಮ್ಮ ಶುಲ್ಕದ ವಿವರ ಹಾಗೂ ಇತ್ತೀಚಿನ ವರ್ಷಗಳಲ್ಲಿ ಶುಲ್ಕದಲ್ಲಿ ಮಾಡಲಾದ ಹೆಚ್ಚಳದ ಮಾಹಿತಿಯನ್ನು ನೀಡುವಂತೆ ಎಲ್ಲ ಖಾಸಗಿ ಶಾಲೆಗಳಿಗೆ ಸಿಬಿಎಸ್‌ಇ ಸೂಚಿಸಿದೆ.

Advertisement

ಆವರಣದಲ್ಲಿ ಸಮವಸ್ತ್ರಗಳು ಹಾಗೂ ಪುಸ್ತಕಗಳನ್ನು ಮಾರುವ ಮೂಲಕ ಶಾಲೆಗಳನ್ನು “ಅಂಗಡಿ’ಗಳನ್ನಾಗಿ ಪರಿವರ್ತಿಸುತ್ತಿರುವ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. “ಕಾರಣವಿಲ್ಲದೇ ಹೆಚ್ಚು ಶುಲ್ಕ ವಿಧಿಸುವುದು ಹಾಗೂ ಗೋಪ್ಯ ವೆಚ್ಚವನ್ನು ಸೇರಿಸುವುದು ಮಾಡಬಾರದು. ಇದು ಮಕ್ಕಳ ಹೆತ್ತವರಿಗೆ ಅತಿದೊಡ್ಡ ತಲೆನೋವಿನ ಸಂಗತಿಯಾಗುತ್ತದೆ. ಎಲ್ಲ ಶಾಲೆಗಳೂ ತಮ್ಮ ಶುಲ್ಕದ ವಿವರಗಳನ್ನು ಒದಗಿಸಬೇಕು. ಒದಗಿಸದೇ ಇರುವಂಥ ಸಂಸ್ಥೆಗಳಿಗೆ ದಂಡ ವಿಧಿಸಲಾಗುವುದು,’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next