Advertisement
ಈ ಬಾರಿ ಕೊವಿಡ್ 19 ಕಾರಣದಿಂದ ಸಿಬಿಎಸ್ಇ ಪರೀಕ್ಷೆಯೇ ಇಲ್ಲದ ಕಾರಣ ಫಲಿತಾಂಶಕ್ಕೆ ಸಂಬಂಧಪಟ್ಟು ಗೊಂದಲಗಳು ಎದ್ದಿದ್ದವು. ಅಷ್ಟೇ ಅಲ್ಲ, ಫಲಿತಾಂಶದ ದಿನಾಂಕ ಕೂಡ ಪದೇಪದೆ ಮುಂದೂಡಲ್ಪಟ್ಟಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಜು.20ರಂದು ಫಲಿತಾಂಶವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾರಿ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಅಂಕ ಕೊಡುವ ಕಾರಣ, ಶಾಲೆಗಳಿಂದ ಅಂಕಗಳು ತಲುಪುವುದು ವಿಳಂಬವಾಯಿತು.
Related Articles
Advertisement
ಹಂತ 1: cbseresults.nic.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ಹಂತ 2: ‘CBSE 10 ನೇ ತರಗತಿ ಫಲಿತಾಂಶ 2021’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನೋಂದಣಿ ಸಂಖ್ಯೆ, ರೋಲ್ ಸಂಖ್ಯೆ ಮತ್ತು ಇತರ ಅಗತ್ಯ ರುಜುವಾತುಗಳನ್ನು ನಮೂದಿಸಿ.
ಹಂತ 4: ನಿಮ್ಮ 10 ನೇ ತರಗತಿಯ ಫಲಿತಾಂಶಗಳು ಪರದೆಯ ಮೇಲೆ ತೆರೆದುಕೊಳ್ಳುತ್ತವೆ.
ಹಂತ 5: ನಿಮ್ಮ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.