ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 10ನೇ ತರಗತಿ ಫಲಿತಾಂಶದಲ್ಲಿ ನಗರದ ಶಾಲೆಗಳು ಹಾಗೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಸಿಬಿಎಸ್‌ಇ 2017-18ನೇ ಸಾಲಿನ 10ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಸಿ.ವಿ. ರಾಮನ್ ನಗರದ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಜಿ. ಚೈತ್ರಾ ಶೇ.99 ಅಂಕಗಳಿಸುವ ಮೂಲಕ ಅಗ್ರಸ್ಥಾನದಲ್ಲಿ ಇದ್ದಾರೆಂದು ಅಂದಾಜಿಸಲಾಗಿದೆ.
ಎಚ್‌ಎಸ್‌ಆರ್ ಬಡಾವಣೆ ನ್ಯಾಷನಲ್ ಪಬ್ಲಿಕ್ ಶಾಲೆಯ ಮನೀಶ್ ಹಾಗೂ ದೆಹಲಿ ಪಬ್ಲಿಕ್ ಸ್ಕೂಲ್‌ನ(ಈಶಾನ್ಯ)ವತ್ಸಲಾ ಗುಪ್ತಾ ತಲಾ ಶೇ.98.8, ಮಾಚೋಹಳ್ಳಿ ವಿದ್ಯಾಕೇಂದ್ರ ಸ್ಮಾರ್ಟ್ ಸ್ಕೂಲ್‌ನ ಎಚ್.ಕೆ. ಯೋಗಿತಾ ಶೇ.98.6, ಸಿಎಂಅರ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಆದಿತ್ಯ ಪಿಲಿಪ್ಸ್ ಶೇ.98.4, ಡಿಪಿಎಸ್ ದಕ್ಷಿಣ ಶಾಲೆಯ ಸ್ನೇಹಾ ಎಸ್.ನೆಲಗಿ, ಸ್ನೇಹಾ ರಾಯ್ ಹಾಗೂ ಸಿಎಂಅರ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಅಪರಾಜಿತಾ ಗುಪ್ತಾ ತಲಾ ಶೇ.98 ಅಂಕ ಪಡೆದುಕೊಂಡಿದ್ದಾರೆ.
ಸಿಎಂಅರ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಅಭಯ್ ನರೇಂದ್ರನ್ ಶೇ.97.6. ಐಟಿಪಿಎಲ್‌ನಲ್ಲಿರುವ ಐಕ್ಯಾ ಶಾಲೆಯ ವಿದ್ಯಾರ್ಥಿಗಳಾದ ಆದಿತ್ಯ ಕಾಂತಿ ಶೇ.96.4, ಶೃತಿಕಾ ಆನಂದ ಶೇ.95.6, ರೋಹಿನ್ ಉದಯ್ ಜೋಷಿ ಶೇ.94.2, ಇಶಿ ನಿಗಮ್ ಶೇ.93.4, ಶೃತಿ ಪರಿಕೇತಿ ಶೇ.93 ಅಂಕಗಳಿಸಿದ್ದಾರೆ.
ಕುಟುಂಬದವರ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಕರ ಸೂಕ್ತ ಮಾರ್ಗದರ್ಶನದ ಜತೆಗೆ ವೈಯಕ್ತಿಕ ಪರಿಶ್ರಮದಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗಿದೆ. ಓದಿನ ಜತೆಗೆ ಚಿತ್ರಕಲೆ ಮತ್ತು ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಪಿಯು ವಿಜ್ಞಾನ ವಿಭಾಗದಲ್ಲಿ ಓದಿ, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಮಾಡಬೇಕೆಂಬ ಬಯಕೆ ಇದೆ.
-ಜಿ. ಚೈತ್ರಾ, ಶೇ.99 ಅಂಕ ಪಡೆದ ವಿದ್ಯಾರ್ಥಿನಿ
ನಿತ್ಯ ಕನಿಷ್ಠ ಐದರಿಂದ ಆರುಗಂಟೆ ಓದುತ್ತಿದ್ದೆ. ಶೇ.90ರಷ್ಟು ಅಂಕಗಳು ಬರಬಹುದು ಎಂದು ನಿರೀಕ್ಷಿಸಿದ್ದೆ. ಶೇ.98ಕ್ಕೂ ಅಧಿಕ ಅಂಕ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹವೂ ಇದರ ಹಿಂದಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿ, ಐಐಎಸ್ಸಿಯಲ್ಲಿ ಸೀಟು ಪಡೆಯಬೇಕೆಂಬ ಗುರಿ ಇದೆ.
-ಆದಿತ್ಯ ಪಿಲಿಪ್ಸ್, ಶೇ.98.4 ಅಂಕ ಪಡೆದ ವಿದ್ಯಾರ್ಥಿ