Advertisement

ಸಿಬಿಎಸ್‌ಇ 10ನೇ ತರಗತಿ ಪರೀಕ್ಷಾ ಫ‌ಲಿತಾಂಶ ಪ್ರಕಟ

03:45 AM Jun 04, 2017 | |

ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು, ಶೇಕಡಾವಾರು ಫ‌ಲಿತಾಂಶದಲ್ಲಿ 5.26ರಷ್ಟು ಇಳಿಕೆಯಾಗಿದೆ. ಬಾಲಕರು, ಬಾಲಕಿಯರಿಗಿಂತ ಶೇ.0.9ರಷ್ಟು ಹೆಚ್ಚು ಫ‌ಲಿತಾಂಶ ಪಡೆದಿದ್ದಾರೆ.

Advertisement

ಕಳೆದ ವರ್ಷ ಶೇ.96.21ರಷ್ಟಿದ್ದ ಫ‌ಲಿತಾಂಶ ಪ್ರಸಕ್ತ ಸಾಲಿನಲ್ಲಿ ಶೇ.90.95ಕ್ಕೆ ಕುಸಿದಿದೆ. ಒಟ್ಟಾರೆ ತೇರ್ಗಡೆ ಹೊಂದಿದವರ ಶೇಕಡಾವಾರು ಪ್ರಮಾಣದಲ್ಲಿ  ಶೇ.5.26ರಷ್ಟು ಇಳಿಕೆಯಾಗಿದೆ. ಅದರಲ್ಲೂ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈ ಪ್ರಮಾಣ ಶೇ.13ರಷ್ಟು ಕಡಿಮೆಯಾಗಿದ್ದು, ಇಲ್ಲಿ ಕಳೆದ ವರ್ಷ ಶೇ.91.06ರಷ್ಟು  ಇದ್ದ ಫ‌ಲಿತಾಂಶ ಈ ವರ್ಷ ಶೇ.78.09ಕ್ಕೆ ಇಳಿದಿದೆ. ಈ ಮೂಲಕ ದೆಹಲಿ ಕಳಪೆ ಸಾಧನೆ ಮಾಡಿದೆ.

ಶೇ.99.85ರಷ್ಟು  ಪಾಸ್‌ ಪರ್ಸಂಟೇಜ್‌ ಗಳಿಸುವ ಮೂಲಕ ತಿರುವನಂತಪುರ ವಲಯವು ಅತ್ಯುತ್ತಮ ಸಾಧನೆ ಮಾಡಿದ್ದು, ಮದ್ರಾಸ್‌(ಚೆನ್ನೈ) ಮತ್ತು ಅಲಹಾಬಾದ್‌ ವಲಯ ಕ್ರಮವಾಗಿ ಶೇ.99.62ರಷ್ಟು ಮತ್ತು ಶೇ.98.23ರಷ್ಟು ಫ‌ಲಿತಾಂಶ ಪಡೆದಿದು ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. 65.53ರಷ್ಟು ಫ‌ಲಿತಾಂಶ ಪಡೆದ ಗೌಹಾಟಿ ಕೊನೆಯ ಸ್ಥಾನದಲ್ಲಿದೆ.

ರಾಜ್ಯದ ಬಹುತೇಕ ಸಿಬಿಎಸ್‌ಇ ಪಠ್ಯಕ್ರಮ ಹೊಂದಿರುವ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್‌ಇ ಬೋರ್ಡ್‌ ನೀಡುವ ಕ್ಯೂಮುಲೇಟಿವ್‌ ಗ್ರೇಡ್‌ ಪಾಯಿಂಟ್‌ ಅವರೇಜ್‌ನಲ್ಲಿ(ಸಿಜಿಪಿಎ) 10ಕ್ಕೆ ಹತ್ತರಷ್ಟು ಅಂಕ ಪಡೆದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಂದ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪೈಕಿ ಶೇ.50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು 10ಕ್ಕೆ 10 ಅಥವಾ 10ಕ್ಕೆ 9.8, 9.6 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ದೇಶದ 16347 ಶಾಲೆಯ 16,60,123 ವಿದ್ಯಾರ್ಥಿಗಳು 3972 ಕೇಂದ್ರದಲ್ಲಿ ಪರೀಕ್ಷೆ  ಬರೆದಿದ್ದರು. ಪರೀಕ್ಷೆ ಬರೆದ ಬಾಲಕರಲ್ಲಿ ಶೇ.93.4ರಷ್ಟು  ಮತ್ತು ಬಾಲಕಿಯರಲ್ಲಿ ಶೇ.92.5ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಫ‌ಲಿತಾಂಶದಲ್ಲಿ ಬಾಲಕರೇ ಮುಂದಿದ್ದಾರೆ. ಸಿಜಿಪಿಎ ಗ್ರೇಡ್‌ನ‌ಲ್ಲೂ 10ಕ್ಕೆ 10 ಅಂಕ ಪಡೆದವರಲ್ಲಿ ಬಾಲಕರೇ ಹೆಚ್ಚಿದ್ದಾರೆ.

Advertisement

ವಲಯವಾರು ಫ‌ಲಿತಾಂಶ:
ತಿರುವನಂತಪುರ ಶೇ.99.85ರಷ್ಟು, ಚೆನ್ನೈ ಶೇ.99.62ರಷ್ಟು, ಅಲಹಬಾದ್‌ ಶೇ.98.23ರಷ್ಟು, ಡೆಹರಾಡೂನ್‌ ಶೇ.97.27ರಷ್ಟು, ಪಾಟ್ನ ಶೇ.95.50ರಷ್ಟು, ಚಂಡೀಗಡ್‌ ಶೇ.94.34ರಷ್ಟು, ಅಜ್ಮಿàರ್‌  ಶೇ.93.30ರಷ್ಟು, ಭುವನೇಶ್ವರ ಶೇ.92.15ರಷ್ಟು, ದೆಹಲಿ ಶೇ.78.09ರಷ್ಟು ಹಾಗೂ ಗೌಹಾಟಿ ಶೇ.65.53ರಷ್ಟು ಫ‌ಲಿತಾಂಶ ಪಡೆದಿದೆ.

ವಿದೇಶಿ ವಿದ್ಯಾರ್ಥಿಗಳು:
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ವಿದೇಶಿ ಶಾಲೆಯ 23,155 ವಿದ್ಯಾರ್ಥಿಗಳು ಹಾಜರಾಗಿದ್ದು,  22,954 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ.99.1ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ಸಂಸ್ಥೆ ವಾರು ಫ‌ಲಿತಾಂಶದಲ್ಲಿ ಜೆಎನ್‌ವಿ ಶೇ.96.67ರಷ್ಟು, ಕೆವಿಎಸ್‌ 99.66ರಷ್ಟು ಮತ್ತು ಸ್ವತಂತ್ರಶಾಲೆಗಳು ಶೇ.97.43ರಷ್ಟು ಫ‌ಲಿತಾಂಶ ಪಡೆದಿದೆ.  ಹಾಗೆಯೇ ವಿವಿಧ ಅಂಗವೈಕಲ್ಯ ಹೊಂದಿದ 4254 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 3803 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಗ್ರೇಡ್‌ ಪಡೆದವರು:
ಸಿಜಿಪಿಎನಲ್ಲೂ ಬಾಲಕರು ಉತ್ತಮ ಸಾಧನೆ ಮಾಡಿದ್ದಾರೆ. 10ಕ್ಕೆ ಹತ್ತು ಪಡೆದವರಲ್ಲಿ 1,05,188 ಬಾಲಕರು ಹಾಗೂ 1,00,950 ಬಾಲಕಿಯರು, 10ಕ್ಕೆ 9.8 ಪಡೆದವರಲ್ಲಿ 29,692 ಬಾಲಕರು, 27,263 ಬಾಲಕಿಯರು, 10ಕ್ಕೆ 9.6 ಪಡೆದವರಲ್ಲಿ 31,975 ಬಾಲಕರು, 26,442 ಬಾಲಕಿಯರು, 10ಕ್ಕೆ 9.4 ಪಡೆದವರಲ್ಲಿ 39,052 ಬಾಲಕರು, 28,677 ಬಾಲಕಿಯರು, 10ಕ್ಕೆ 9.2 ಪಡೆದವರಲ್ಲಿ 36,859 ಬಾಲಕರು, 27,202 ಬಾಲಕಿಯರು ಮತ್ತು 10ಕ್ಕೆ 9 ಪಡೆದವರಲ್ಲಿ 37,592 ಬಾಲಕರು ಹಾಗೂ 26,977 ಬಾಲಕರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next