Advertisement

ಸಿಬಿಎಸ್‌ಇ: 500ಕ್ಕೆ 499: ನಾಲ್ವರು ಟಾಪರ್‌

10:08 AM May 30, 2018 | Harsha Rao |

ನವದೆಹಲಿ: ಒಟ್ಟು 500 ಅಂಕಗಳಿಗೆ ಈ ನಾಲ್ವರು ವಿದ್ಯಾರ್ಥಿಗಳು ಗಳಿಸಿದ್ದು ತಲಾ 499 ಅಂಕ. ಅಂದರೆ, ಶೇ. 99.80ರ ಸಾಧನೆ!

Advertisement

ಮಂಗಳವಾರ ಸಂಜೆ ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿ ಪರೀûಾ ಫ‌ಲಿತಾಂಶಗಳಲ್ಲಿ ಗುರುಗ್ರಾಮದ ಡಿಪಿಎಸ್‌ ಶಾಲೆಯ ಪ್ರಖರ್‌ ಮಿತ್ತಲ್‌, ಬಿಜ್ನೋರ್‌ನ ಆರ್‌.ಪಿ. ಪಬ್ಲಿಕ್‌ ಶಾಲೆಯ ರಿಮಿjಮ್‌ ಅಗರ್ವಾಲ್‌, ಶಾಮ್ಲಿಯ ಸ್ಕಾಟಿಷ್‌ ಇಂಟರ್‌ ನ್ಯಾಶನಲ್‌ ಸ್ಕೂಲ್‌ನ ನಂದಿನಿ ಗಾರ್ಗ್‌ ಹಾಗೂ ಕೊಚ್ಚಿಯ ಭವನ್ಸ್‌ ವಿದ್ಯಾಲಯ ಶಾಲೆಯ ಜಿ. ಶ್ರೀಲಕ್ಷಿ ಈ ಸಾಧನೆ ಮಾಡಿದ ವಿದ್ಯಾರ್ಥಿಗಳು. 

7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ (ತಲಾ 498 ಅಂಕ) ಹಾಗೂ 14 ವಿದ್ಯಾರ್ಥಿಗಳು ತೃತೀಯ ಸ್ಥಾನ (ತಲಾ 497 ಅಂಕ) ಪಡೆದಿದ್ದಾರೆ. 135 ವಿಕಲಚೇತನರು ಶೇ. 90ಕ್ಕಿಂತಲೂ ಹೆಚ್ಚು ಅಂಕಗಳಿಸಿರುವುದು ಈ ಬಾರಿಯ ಮತ್ತೂಂದು ವಿಶೇಷ. 

ಬಾಲಕಿಯರಲ್ಲಿ ಶೇ. 88.87ರಷ್ಟು ವಿದ್ಯಾರ್ಥಿನಿಯರು ಯಶಸ್ಸು ಗಳಿಸಿದ್ದು, ಎಂದಿನಂತೆ ಈ ಬಾರಿಯೂ ಬಾಲಕರಿಗಿಂತ (ಶೇ. 85.32) ಮೇಲುಗೈ ಸಾಧಿಸಿದ್ದಾರೆ. ಇನ್ನು, ಅತಿ ಹೆಚ್ಚು ಶೇಕಡಾವಾರು ಉತ್ತೀರ್ಣತೆ ದಾಖಲಿಸಿದ ನಗರಗಳಲ್ಲಿ ತಿರುವನಂತಪುರ (ಶೇ. 99.60) ಇದ್ದು, ಆನಂತರದ ಸ್ಥಾನಗಳಲ್ಲಿ ಚೆನ್ನೈ (ಶೇ.97.37) ಮತ್ತು ಅಜೆ¾àರ್‌ (ಶೇ.91.86) ಇವೆ. ಫ‌ಲಿತಾಂಶ ಪ್ರಕಟವಾದ ಬಳಿಕ ದಿಲ್ಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next