Advertisement
ಮೇಘನಾ ಶೇ. 99.8 ಗಳಿಸಿದ್ದು, 500 ಅಂಕಗಳಲ್ಲಿ 499 ಅಂಕ ಪಡೆದಿದ್ದಾರೆ. ನೋಯ್ಡಾದ ಸ್ಟೆಪ್ ಬೈ ಸ್ಟೆಪ್ ಶಾಲೆಯ ವಿದ್ಯಾರ್ಥಿನಿ ಈಕೆ. ಇಂಗ್ಲಿಷ್‌ನಲ್ಲಿ 99 ಪಡೆದಿರುವ ಈಕೆ, ಉಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ಎರಡನೇ ಸ್ಥಾನವೂ ಕಲಾ ವಿಭಾಗದ ಅನುಷ್ಕಾ ಚಾಂದ್ ಪಾಲಾಗಿದ್ದು, ಈಕೆ ಗಾಜಿಯಾಬಾದ್ ಶಾಲೆಯ ವಿದ್ಯಾ ರ್ಥಿನಿ. ಈಕೆ 500 ಕ್ಕೆ 498 ಅಂಕ ಪಡೆದಿದ್ದಾಳೆ. ಮೂರನೇ ಸ್ಥಾನವನ್ನು ಏಳು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇವರು 500ಕ್ಕೆ 497 ಅಂಕ ಪಡೆದಿದ್ದಾರೆ.
ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಶಬೀರ್ ಶಾ ಪುತ್ರಿ ಸಮಾ ಶಬೀರ್ ಸಿಬಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಇಲ್ಲಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿ ರುವ ಸಮಾ ಶೇ.97.8 ಅಂಕಗಳನ್ನು ಪಡೆದಿದ್ದಾಳೆ. ಈಕೆಯ ತಂದೆ, ಜಮ್ಮು ಕಾಶ್ಮೀರ ಡೆಮಾಕ್ರಾಟಿಕ್ ಫ್ರೀಡಂ ಪಾರ್ಟಿ ಮುಖ್ಯಸ್ಥ ಶಬೀರ್ ಶಾ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರಿಗೆ ಹಣಕಾಸು ನೆರವು ಒದಗಿಸಿದ ಆರೋಪದಲ್ಲಿ ಈತನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.