Advertisement
ಯುಜಿಸಿ ಮಧ್ಯಸ್ಥಿಕೆ ವಹಿಸುವಂತೆ ಸಿಬಿಎಸ್‌ಇ ಕೇಳಿಕೊಂಡಿತ್ತು. ಸಿಬಿಎಸ್‌ಇ ಮನವಿಗೆ ಪ್ರತಿಕ್ರಿಯಿಸಿರುವ ಯುಜಿಸಿ, “ಕೆಲವು ವಿಶ್ವವಿದ್ಯಾನಿಲಯಗಳು ಈ ಸಂದರ್ಭದಲ್ಲಿ (2022-2023) ಅಧಿವೇಶನಕ್ಕಾಗಿ ಪದವಿಪೂರ್ವ ಕೋರ್ಸ್‌ಗಳಲ್ಲಿ ನೋಂದಣಿಯನ್ನು ಪ್ರಾರಂಭಿಸಿರುವುದು ಗಮನಕ್ಕೆ ಬಂದಿದೆ, ಸಿಬಿಎಸ್ ಇ ಫಲಿತಾಂಶ ಘೋಷಣೆಗೆ ಮೊದಲು ವಿಶ್ವವಿದ್ಯಾಲಯಗಳು ಕೊನೆಯ ದಿನಾಂಕವನ್ನು ನಿಗದಿಪಡಿಸಿದರೆ ಸಿಬಿಎಸ್‌ಇ ವಿದ್ಯಾರ್ಥಿಗಳು ಪದವಿಪೂರ್ವ ಕೋರ್ಸ್‌ಗಳ ಪ್ರವೇಶದಿಂದ ವಂಚಿತರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.
Related Articles
Advertisement
ಜುಲೈ ಅಂತ್ಯದ ವೇಳೆಗೆ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದು ಸಿಬಿಎಸ್‌ಇ ಮೂಲಗಳು ತಿಳಿಸಿದ್ದವು. ಈಗ, ವಿದ್ಯಾರ್ಥಿಗಳು ಜುಲೈ ಅಂತ್ಯದೊಳಗೆ 12 ನೇ ತರಗತಿಯ ಫಲಿತಾಂಶಗಳನ್ನು ಮತ್ತು ಆಗಸ್ಟ್ ಮೊದಲ ವಾರದೊಳಗೆ 10 ನೇ ತರಗತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎನ್ನಲಾಗಿದೆ.
2020 ರಲ್ಲಿ ಫಲಿತಾಂಶವನ್ನು ಜುಲೈ 30 ರಂದು ಪ್ರಕಟಿಸಲಾಗಿತ್ತು ಮತ್ತು 2021 ರಲ್ಲಿ 12 ನೇ ತರಗತಿಯ ಫಲಿತಾಂಶ ಜುಲೈ ಅಂತ್ಯದಲ್ಲಿ ಮತ್ತು ಆಗಸ್ಟ್‌ನಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಘೋಷಿಸಲಾಗಿತ್ತು. ಈ ವರ್ಷವೂ ಇದೇ ರೀತಿ ನಿರೀಕ್ಷಿಸಬಹುದು. ಈ ವರ್ಷ ಎರಡು ಅವಧಿಯ ಪರೀಕ್ಷೆಗಳು ಇರುವುದರಿಂದ ಮತ್ತು ಅಂತಿಮ ಫಲಿತಾಂಶವನ್ನು ಲೆಕ್ಕಾಚಾರ ಮಾಡುವ ಸೂತ್ರವನ್ನು ನಿರ್ಧರಿಸದ ಕಾರಣ ವಿಳಂಬವಾಗುತ್ತಿದೆ. ಸೂತ್ರವು ಟರ್ಮ್ 1 ಮತ್ತು ಟರ್ಮ್ 2 ಫಲಿತಾಂಶಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಆಂತರಿಕ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.