Advertisement

ಸಿಬಿಎಸ್‌ಇ 10, 12ನೇ ತರಗತಿ: ಸದ್ಯಕ್ಕೆ ಯಾರೂ ಫೇಲ್‌ ಆಗಲ್ಲ

01:39 AM Dec 24, 2021 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳಿಗೆ ನೋಂದಣಿ ಮಾಡಿಕೊಂಡ ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ ಅತೀ ­ದೊಡ್ಡ ರಿಲೀಫ್ ಸಿಕ್ಕಿದೆ.

Advertisement

ಈ ಬಾರಿ ಯಾವುದೇ ವಿದ್ಯಾರ್ಥಿಯನ್ನು ಅನು­ತ್ತೀರ್ಣ­ಗೊಳಿಸದೇ ಇರಲು ಸಿಬಿಎಸ್‌ಇ ನಿರ್ಧರಿಸಿದೆ. ಮೊದಲನೇ ಅವಧಿಯ ಪರೀಕ್ಷೆ ಕಷ್ಟವಿತ್ತು ಎಂದು ನೊಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಇದರಿಂದ ಸಿಹಿಸುದ್ದಿ ಸಿಕ್ಕಂತಾಗಿದೆ.

ಎರಡು ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಹೊಸದು. ಟರ್ಮ್ 1 ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆ­ಗಳ ಮಾದರಿ­ಯಲ್ಲಿ ನಡೆದಿದ್ದ ಕಾರಣ ವಿದ್ಯಾರ್ಥಿಗಳಿಗೆ ಇದು ಸಾಮಾನ್ಯಕ್ಕಿಂತ ಕಷ್ಟ ಎನಿಸಿತ್ತು.

ಈಗ ಮಂಡಳಿಯು, ಸದ್ಯಕ್ಕೆ ಯಾವುದೇ ವಿದ್ಯಾರ್ಥಿಯನ್ನು ಪಾಸ್‌-ಫೇಲ್‌ ಮಾಡದೇ ಇರಲು ನಿರ್ಧರಿಸಿದೆ. ಮೊದಲ ಅವಧಿಯ ಪರೀಕ್ಷೆ ಫ‌ಲಿತಾಂಶದಲ್ಲಿ ಕೇವಲ ಅಂಕಗಳಷ್ಟೇ ಇರುತ್ತವೆ.

ಇದನ್ನೂ ಓದಿ:ಸಿದ್ದರಾಮಯ್ಯಗೆ ವಯಸ್ಸಾಗಿಲ್ಲ ಎಂದ ಈಶ್ವರಪ್ಪ

Advertisement

ಎರಡನೇ ಅವಧಿಯ ಪರೀಕ್ಷೆ ಪೂರ್ಣಗೊಂಡ ಬಳಿಕ, ಟರ್ಮ್ 1, ಟರ್ಮ್ 2 ಮತ್ತು ಆಂತರಿಕ ಮೌಲ್ಯಮಾಪನದ ಅಂಕಗಳ­ನ್ನೆಲ್ಲ ಒಟ್ಟಾಗಿ ಪರಿಗಣಿಸಿ ಅಂತಿಮ ಮೆರಿಟ್‌ ಪಟ್ಟಿ ತಯಾರಿಸಲಾಗುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next