ಹತ್ತು ವರ್ಷಗಳಿಂದ ಒಂದೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು
Advertisement
ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯಲ್ಲಿ ಹತ್ತು ವರ್ಷಗಳಿಂದ ಒಂದೇ ಹಂತದಲ್ಲಿ ಕೆಲಸ ಮಾಡಿಕೊಂಡಿದ್ದ 200 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ವಿಶೇಷವಾಗಿ ಕೆಳ ಹಂತದ ಕ್ಲರ್ಕ್ (ಎಲ್‌ಡಿಸಿ), ಉನ್ನತ ದರ್ಜೆ ಕ್ಲರ್ಕ್ (ಯುಡಿಸಿ)ಗಳನ್ನು, ಅಪರಾಧ ಪ್ರಕರಣಗಳ ತನಿಖೆಗಳಲ್ಲಿ ನೆರ ವಾಗುವ ಸಹಾಯಕ ಸಿಬಂದಿ, ಕಚೇರಿ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
Related Articles
ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಈ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವರ್ಗಾವಣೆ ಮಾಡಿರಲಿಲ್ಲ. ಸಿಬಿಐನ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಎ.ಕೆ.ಭಟ್ನಾಗರ್ ಆ.21ರಂದು ಆಯಾ ಘಟಕಗಳ ಮುಖ್ಯಸ್ಥರಿಗೆ ಬರೆದಿದ್ದ ಪತ್ರದಲ್ಲಿ ಹಲವು ವರ್ಷಗಳಿಂದ ಒಂದೇ ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಹೆಸರು ಗುರುತಿಸುವಂತೆ ಸೂಚಿಸಿದ್ದರು. ಇದರ ಜತೆಗೆ ಆಯಾ ಘಟಕಗಳಲ್ಲಿಯೇ ಉಳಿಸಿಕೊಳ್ಳಬಹುದಾದವರ ಹೆಸರುಗಳನ್ನು ಖಚಿತಪಡಿಸುವಂತೆ ಕೋರಿಕೆ ಸಲ್ಲಿಸಿದ್ದರು.
Advertisement
ಸೆ.20ರಂದು ಸುಮಾರು 200 ಸಿಬಂದಿಯ ಹೆಸರುಗಳನ್ನು ಆಯಾ ಘಟಕಗಳ ಮುಖ್ಯಸ್ಥರು ಕೇಂದ್ರ ಕಚೇರಿಗೆ ರವಾನಿಸಿದ್ದರು.
ಇದೇ ವೇಳೆ ಸೆ.23ರಂದು ಸಿಬಿಐನ 16 ಮಂದಿ ಸಬ್-ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಇದು ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿರಲಿಲ್ಲ ಎಂದು ಆಅಧಿಕಾರಿ ಹೇಳಿದ್ದಾರೆ.
ಸಂಸ್ಥೆಯ ಹಿತದೃಷ್ಟಿಯಿಂದ ಕ್ರಮಭ್ರಷ್ಟಾಚಾರ ವಿರೋಧಿ ವಿಭಾಗ, ಜಾಗೃತ ವಿಭಾಗ, ವಿಶೇಷ ಅಪರಾಧಗಳು, ಆರ್ಥಿಕ ಅಪರಾಧಗಳು ಮತ್ತು ನೀತಿ ನಿರೂಪಣೆ ವಿಭಾಗಗಳಲ್ಲಿ ಹತ್ತು ವರ್ಷಗಳಿಂದ ಹೆಚ್ಚಿನ ಕಾಲ ಕೆಲಸ ಮಾಡುತ್ತಿದ್ದವರ ಬಳಿ ಪ್ರಕರಣಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಇರುವ ಸಾಧ್ಯತೆ ಇದೆ. ಹೀಗಾಗಿ ಸಿಬಿಐ ಸಂಸ್ಥೆಯ ಹಿತದೃಷ್ಟಿಯಿಂದ ವರ್ಗಾವಣೆ ಅಗತ್ಯವೆಂದು ನಿರ್ಣಯಿಸಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.