Advertisement

ಜೂನ್ 13, 14ರಂದು ಏನು ನಡೆಯಿತು? ಸುಶಾಂತ್ ಗೆಳೆಯ ಪಿತಾನಿಗೆ ಸಿಬಿಐ ಸಾಲು, ಸಾಲು ಪ್ರಶ್ನೆ!

04:09 PM Aug 22, 2020 | Nagendra Trasi |

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದ ಹಿನ್ನೆಲೆಯಲ್ಲಿ ಸುಶಾಂತ್ ಆಪ್ತ ಗೆಳೆಯ ಸಿದ್ದಾರ್ಥ್ ಪಿತಾನಿ ಹಾಗೂ ಅಡುಗೆ ಕೆಲಸದ ನೀರಜ್ ಅವರನ್ನು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಮೂಲಗಳ ಪ್ರಕಾರ, ಜೂನ್ 13 ಮತ್ತು 14ರಂದು ರಾತ್ರಿ ಏನು ನಡೆಯಿತು ಎಂಬ ಬಗ್ಗೆ ಪಿತಾನಿಗೆ ಮುಖ್ಯವಾದ ಪ್ರಶ್ನೆಯನ್ನು ಸಿಬಿಐ ಕೇಳಿದ್ದು, ಇದೀಗ ಸಿಬಿಐ ಈ ಬಗ್ಗೆ ಸ್ಪಷ್ಟವಾದ ಉತ್ತರ ಹುಡುಕಲು ಮುಂದಾಗಿರುವುದಾಗಿ ವರದಿ ವಿವರಿಸಿದೆ.

ಸಿಬಿಐ ಕೇಳಿದ್ದ ಪ್ರಶ್ನಾವಳಿ:

*ಜೂನ್ 13ರಂದು ಸುಶಾಂತ್ ನಿವಾಸದಲ್ಲಿ ಯಾರೆಲ್ಲ ಇದ್ದಿದ್ದರು?

*ಸುಶಾಂತ್ ಮನೆಯ ಬಾಗಿಲನ್ನು ತೆರೆಯಲು ಕೀ ಮೇಕರ್ ಗೆ ಕರೆ ಮಾಡಿದ್ದೀರಾ?

Advertisement

*ಮುಂಬೈ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು ಯಾರು?

*ನೇಣಿಗೆ ಶರಣಾಗಿದ್ದ ಸುಶಾಂತ್ ಶವವನ್ನು ನೀವು ಕೆಳಗಿಳಿಸಿದ್ದೀರಾ? ಒಂದು ವೇಳೆ ಹೌದು ಎಂದಾದರೆ, ಆ ಬಳಿಕ ನಿಮ್ಮನ್ನು ಯಾರು ವಿಚಾರಿಸಿದ್ದರು.

*ಸುಶಾಂತ್ ಅವರನ್ನು ಹೇಗೆ ಮತ್ತು ಯಾವಾಗ ಭೇಟಿಯಾಗುತ್ತಿದ್ದೀರಿ?

* ಸುಶಾಂತ್ ಈ ಸ್ಥಳವನ್ನು ಯಾರೆಲ್ಲಾ ಉಪಯೋಗಿಸುತ್ತಿದ್ದೀರಿ?

*ದಿಶಾ ಸಾಲ್ಯಾನ್ ಆತ್ಮಹತ್ಯೆ ವಿಷಯ ಕೇಳಿದ ನಂತರ ಸುಶಾಂತ್ ಪ್ರತಿಕ್ರಿಯೆ ಹೇಗಿತ್ತು?

*ನೀವು ಮತ್ತು ಸುಶಾಂತ್ ಯಾವಾಗಲಾದರೂ ದಿಶಾ ಸಾಲ್ಯಾನ್ ಸಾವಿನ ಬಗ್ಗೆ ಮಾತನಾಡಿಕೊಂಡಿದ್ದೀರಾ? ಒಂದು ವೇಳೆ ಹೌದು ಎಂದಾದರೆ ನೀವು ಏನು ಚರ್ಚೆ ಮಾಡಿದ್ದೀರಿ?

*ನಿಮಗೆ ರಿಯಾ ಚಕ್ರವರ್ತಿ ಪರಿಚಯ ಇದೆಯಾ? ಹೌದು ಎಂದಾದರೆ, ನಿಮಗೆ ಆಕೆ ಬಗ್ಗೆ ಹೇಗೆ ಮತ್ತು ಏನೆಲ್ಲಾ ತಿಳಿದಿದೆ ಎಂಬುದನ್ನು ವಿವರಿಸಿ.

*ಸುಶಾಂತ್ ಸಿಂಗ್ ಮತ್ತು ರಿಯಾ ಸಂಬಂಧ ಹೇಗಿತ್ತು? ಯಾಕೆ ಅವರು ತಡರಾತ್ರಿ ಜಗಳಕ್ಕಿಳಿಯುತ್ತಿದ್ದರು. ಹೀಗೆ ಹಲವು ಪ್ರಮುಖ ಪ್ರಶ್ನೆಗಳನ್ನು ಪಿತಾನಿಗೆ ಸಿಬಿಐ ಅಧಿಕಾರಿಗಳು ಕೇಳಿದ್ದು, ಉತ್ತರ ನೀಡುವಂತೆ ಸೂಚಿಸಿರುವುದಾಗಿ ವರದಿ ವಿವರಿಸಿದೆ.

2020ರ ಜೂನ್ 14ರಂದು ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದ ವೇಳೆ ಸಿದ್ದಾರ್ಥ ಪಿತಾನಿ ಕೂಡಾ ರೂಂನಲ್ಲಿದ್ದ. ಸಿಬಿಐ ಅಧಿಕಾರಿಗಳು ಸುಶಾಂತ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ವೈದ್ಯಾಧಿಕಾರಿ ಅವರನ್ನು ಕೂಡಾ ವಿಚಾರಣೆ ನಡೆಸಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next