Advertisement

ಐಎಂಎ ವಂಚನೆ ಪ್ರಕರಣ: ಇಬ್ಬರು ಐಪಿಎಸ್‌,ಕೆಲ ಪೊಲೀಸರಿಗೆ ಸಿಬಿಐ ಉರುಳು?

12:04 PM Nov 25, 2020 | Mithun PG |

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ನಿಂದ ಲಾಭ ಪಡೆದುಕೊಂಡಿದ್ದಾರೆಎನ್ನಲಾದ ರಾಜ್ಯದ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.ಮಾಜಿ ಶಾಸಕ ರೋಷನ್‌ ಬೇಗ್‌ ಬಂಧನದ ಬೆನ್ನಲ್ಲೆ,. ಐಎಂಎ ಮಾಲೀಕ ಮನ್ಸೂರ್‌ ಅಲಿಖಾನ್‌ ಪರ ವರದಿ ನೀಡಿದ ಆರೋಪದ ಮೇಲೆ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಅಜಯ್‌ ಹಿಲೋರಿ, ಹೇಮಂತ್‌ ನಿಂಬಾಳ್ಕರ್‌ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳನ್ನು ಸಿಬಿಐನ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಹಾಗೂ ಕೆಲ ಪೊಲೀಸ್‌ ಅಧಿಕಾರಿಗಳನ್ನು ಒಂದು ಸುತ್ತು ವಿಚಾರಣೆ ನಡೆಸಲಾಗಿದೆ. ಆದರೆ, ಅಜಯ್‌ಹಿಲೋರಿಅವರನ್ನುವಿಚಾರಣೆ ನಡೆಸಿಲ್ಲ.ಹೀಗಾಗಿಅಜಯ್‌ ಹಿಲೋರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದು, ಸದ್ಯದಲ್ಲೇ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿ ಕೆಲ ಪೊಲೀಸ್‌ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಪೊಲೀಸ್‌ ಅಧಿಕಾರಿಗಳಕರ್ತವ್ಯಲೋಪದ ಬಗ್ಗೆ ಉಲ್ಲೇಖೀಸಿದ್ದರು.

ಸಿಬಿಐ ತನಿಖೆಯಲ್ಲಿ ಪತ್ತೆಯಾದ ಅಂಶಗಳು: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2016 ಆ.12ರಂದು ರಾಜ್ಯ ಡಿಜಿಪಿಗೆ ಪತ್ರ ಮುಖೇನ ಐಎಂಎ ಕಂಪನಿ ಬಗ್ಗೆ ನಿಗಾ ವಹಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಅಂದು ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್‌ ಹಿಲೋರಿ ಮೂಲಕ ಕಮರ್ಷಿಯಲ್‌ ಸ್ಟ್ರೀಟ್‌ ಇನ್ಸ್‌ಪೆಕ್ಟರ್‌ ರಮೇಶ್‌ಗೆ ಈ ಪತ್ರ ರವಾನಿಸಲಾಗಿತ್ತು.

ಐಎಂಎ ಕಂಪನಿ ವಿರುದ್ಧ ಯಾವುದೇತನಿಖೆ ನಡೆಸದೆ,ಕಂಪನಿ ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ರಮೇಶ್‌ ತನಿಖಾ ವರದಿಯಲ್ಲಿ ಉಲ್ಲೇಖೀಸಿ ಡಿಸಿಪಿ ಅಜಯ್‌ ಹಿಲೋರಿಗೆ ನೀಡಿದ್ದರು.

Advertisement

ಇದನ್ನೂ ಓದಿ:ದಂಡದ ಮೊತ್ತ 329 ಕೋಟಿ ರೂ. ಬಾಕಿ: ವಾಹನ ದಂಡ ಪಾವತಿಗೆ ಪೊಲೀಸರ ಹೊಸ ಅಸ್ತ್ರ

2016 ಆ.29 ರಂದು ರಮೇಶ್‌ ಪ್ರಕರಣ ಮುಕ್ತಾಯಗೊಳಿಸಿದ್ದರು. ಈ ವರದಿ ತಿರಸ್ಕರಿಸಿದ ಆರ್‌ಬಿಐ ಮರು ಪರಿಶೀಲಿಸುವಂತೆ ಡಿಸಿಪಿಗೆ ಸೂಚಿಸಿತ್ತು. ಆದರೆ, ಅಜಯ್‌ ಹಿಲೋರಿ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ ಎಂಬ ನೆಪ ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು.

ಮತ್ತೂಂದೆಡೆ 2018 ಜು.4ರಂದು ಕೆಪಿಐಡಿ ಕಾಯ್ದೆ-2004ರ ಅಡಿ ಐಎಂಎ ಕಂಪನಿ ವಿರುದ್ಧ ತನಿಖೆ ನಡೆಸಲು ಡಿಜಿಪಿ ಅವರು ಆರ್ಥಿಕ ಅಪರಾಧಗಳ ವಿಭಾಗಕ್ಕೆ ನಿರ್ದೇಶಿಸಿದ್ದರು. ಡಿವೈಎಸ್ಪಿ ಶ್ರೀಧರ್‌ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.

2019 ಜ.1ರಂದು ಐಎಂಎ ಕಂಪನಿಗೆ ಸಿಐಡಿ ಕ್ಲೀನ್‌ ಚಿಟ್‌ಕೊಟ್ಟಿತ್ತು. ಆಗಿನ ಸಿಐಡಿ ಐಜಿಪಿಯಾಗಿದ್ದ ಹೇಮಂತ್‌ ನಿಂಬಾಳ್ಕರ್‌ ಈ ವರದಿಯನ್ನು ಡಿಜಿಪಿಗೆ ರವಾನಿಸಿದ್ದು, ತನಿಖೆ ಸಂದರ್ಭದಲ್ಲಿ ಐಎಂಎ ಕಂಪನಿ ಕಡೆಯಿಂದ ಯಾವುದೇ ತಪ್ಪು ಕಂಡು ಬಂದಿಲ್ಲ ಎಂದು ವರದಿ ನೀಡಿದ್ದರು. ಈ ಮೂಲಕ ವಂಚಕ ಕಂಪನಿಗೆ ಪರೋಕ್ಷವಾಗಿ ಅಧಿಕಾರಿಗಳು ಸಹಕಾರ ನೀಡಿದ್ದರು ಎಂಬ ಆರೋಪ ಇತ್ತು

Advertisement

Udayavani is now on Telegram. Click here to join our channel and stay updated with the latest news.

Next