Advertisement

CBI: ಶಿಕ್ಷೆಗೊಳಗಾದವರ ಪ್ರಮಾಣ ಏರಿಕೆ

12:56 AM Apr 07, 2023 | Team Udayavani |

ಹೊಸದಿಲ್ಲ: ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿರುವ ಪ್ರಕರಣಗಳ ಪೈಕಿ ಶಿಕ್ಷೆಗೊಳಗಾದವರ ಪ್ರಮಾಣ 2022ರಲ್ಲಿ ಶೇ. 74.59ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಸಭೆಗೆ ಸರಕಾರ ಗುರುವಾರ ಮಾಹಿತಿ ನೀಡಿದೆ. 2018ರಲ್ಲಿ ಶಿಕ್ಷೆಗೊಳಗಾದವರ ಪ್ರಮಾಣ ಶೇ. 68ರಷ್ಟಿತ್ತು. ಅನಂತರ 2019ರಲ್ಲಿ ಶೇ. 69.19 ಹಾಗೂ 2020-21ರಲ್ಲಿ ಕ್ರಮವಾಗಿ ಶೇ. 69.83 ಮತ್ತು 67.56ಕ್ಕೆ ಏರಿಕೆಯಾಗಿದೆ. 2022ರಲ್ಲಿ ಈ ಪ್ರಮಾಣ ಶೇ. 74.59ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸಿಬಂದಿ ಖಾತೆ ಸಹಾಯಕ ಸಚಿವರಾದ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ಸಿಬಿಐ ದಾಖಲಿಸುವ ಪ್ರಕರಣಗಳ ತ್ವರಿತ ಹಾಗೂ ನ್ಯಾಯೋಚಿತ ತನಿಖೆ ಮತ್ತು ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣಗಳ ಇತ್ಯರ್ಥ, ಶಿಕ್ಷೆ ಗುರಿಪಡಿಸುವ ಕ್ರಮಗಳು ಕೂಡ ಹೆಚ್ಚಾಗಿವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next