Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಹಾಗೂ ಇಡಿಯವರು ಈ ಹಿಂದೆಯೇ ಡಿ.ಕೆ. ಶಿವಕುಮಾರ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ಮತ್ತೆ ದಾಳಿ ನಡೆಸಿದ್ದಾರೆ. ಸಿಬಿಐನವರು ಏಕಾಏಕಿ ದಾಳಿ ನಡೆಸಲ್ಲ. ಅವರು ಆರು ತಿಂಗಳ ಕಾಲ ಸಮಗ್ರ ತನಿಖೆ ನಡೆಸಿ, ಅನುಮಾನ ಬಂದರೆ ದಾಳಿ ನಡೆಸುತ್ತಾರೆ ಎಂದರು.
Related Articles
Advertisement
ಸಿಬಿಐ ದಾಳಿ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ದಾಳಿ ಮಾಡಲು ಬಿಜೆಪಿಯ ಯಾರೊಬ್ಬರೂ ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿ, ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಚುನಾವಣೆ ಘೋಷಣೆ ಬಳಿಕ ಚರ್ಚೆ:
ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆ ಘೋಷಣೆಯಾಗಿಲ್ಲ. ಹೀಗಾಗಿ ಈಗಲೇ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆಸಿಲ್ಲ. ಕೇಂದ್ರದ ರೈಲ್ವೆ ಖಾತೆಯ ಅತ್ಯಂತ ಕ್ರಿಯಾಶೀಲ ಸಚಿವರನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ. ಆ ದುಃಖದಿಂದ ಇನ್ನೂ ನಾವು ಹೊರ ಬಂದಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆ ಕುರಿತು ಚರ್ಚೆಯೂ ನಡೆದಿಲ್ಲ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ಮಾಜಿ ಶಾಸಕರಾದ ಪಿ.ಎಚ್. ಪೂಜಾರ, ನಾರಾಯಣಸಾ ಬಾಂಡಗೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಉಪಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತವಾಗಿಯೇ ಸಿಬಿಐ ದಾಳಿ: ಎಂ.ಬಿ.ಪಾಟೀಲ್
ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈ
ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಸಹಿತ ವಿವಿಧ ಕಾನೂನು ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಯಗಳ ಹೆಸರಿನಲ್ಲಿ ನಡೆದ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪ್ರತಿಭಟನೆ ನಡೆಸಿದವರು ನಿಜವಾದ ರೈತ ಸಂಘಟನೆಯವರಲ್ಲ. ಹೀಗಾಗಿ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯಾದ್ಯಂತ ರೈತ ಜಾಗೃತಿ ಅಭಿಯಾನ ಆರಂಭಿಸಿದ್ದು, ಗ್ರಾಮಸಭೆ ಮೂಲಕ ತಿದ್ದುಪಡಿ ಮಸೂದೆಗಳ ಕುರಿತು ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಈರಣ್ಣ ಕಡಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ:ತನಿಖಾ ವರದಿ ಸಲ್ಲಿಸಲು ಎಸ್ ಐಟಿಗೆ ಮತ್ತೆ 10 ದಿನಗಳ ಕಾಲಾವಕಾಶ: ಸಿಎಂ