ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‌ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಶೋಧ ನಡೆಸಿದೆ.
ಇದು ಲಾಲು ಯಾದವ್ ಮತ್ತು ಅವರ ಮಗಳ ವಿರುದ್ಧ ಹೊಸ ಪ್ರಕರಣವಾಗಿದೆ. ಪ್ರಾಥಮಿಕ ತನಿಖೆಯನ್ನು ಸಿಬಿಐ ಆರಂಭಿಸಿದ್ದು ಅದನ್ನು ಈಗ ಎಫ್‌ಐಆರ್ ಆಗಿ ಪರಿವರ್ತಿಸಲಾಗಿದೆ.
ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಮತ್ತು ಅವರ ಮಗಳ ವಿರುದ್ಧ ಹೊಸ ಪ್ರಕರಣ ಇದಾಗಿದೆ. ಉದ್ಯೋಗಕ್ಕಾಗಿ ಪ್ರತಿಯಾಗಿ ನಿರ್ದಿಷ್ಟ ಭೂಮಿ ಅಥವಾ ನಿವೇಶನಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಆರೋಪವಿದೆ.
ಲಾಲು, ಅವರ ಪತ್ನಿ ರಾಬ್ರಿ ಮತ್ತು ಮಗಳು ಮಿಸಾ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಬಿಹಾರ ಮತ್ತು ದೆಹಲಿಯ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಮೇವು ಹಗರಣ ಪ್ರಕರಣದಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ವಾರಗಳ ಹಿಂದಷ್ಟೇ ಜಾಮೀನು ಪಡೆದಿದ್ದರು.
ಇದನ್ನೂ ಓದಿ:ಅಮೆರಿಕಕ್ಕೆ ಈಗ ಮಂಕಿಪಾಕ್ಸ್ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?