Advertisement
ಯುಪಿಎ ಸರಕಾರದ ಅವಧಿಯಲ್ಲಿ ಚಿನ್ನ ಆಮದು ಸಂಬಂಧಿಸಿದಂತೆ 20:80 ಸ್ಕೀಮ್ ಅನ್ನು ಘೋಷಿಸಲಾಗಿತ್ತು. ಇದರ ಅಡಿಯಲ್ಲಿ ವಜ್ರ ಉದ್ಯಮಿಗಳು ಭಾರಿ ಲಾಭ ಮಾಡಿಕೊಂಡಿದ್ದು, ಸರಕಾರಕ್ಕೆ ಅಪಾರ ನಷ್ಟ ಉಂಟಾಗಿತ್ತು ಎಂದು ಆರೋಪಿಸಲಾಗಿದೆ. ಖಾನ್ ಜತೆಗೆ, ಮೂವರು ಮುಖ್ಯ ಪ್ರಧಾನ ವ್ಯವಸ್ಥಾಪಕರನ್ನೂ ಸಿಬಿಐ ವಿಚಾರಣೆ ನಡೆಸಿದೆ. ಇನ್ನೊಂದೆಡೆ ನೀತಿ ನಿಯಮಗಳ ವಿಚಾರದಲ್ಲಿ ಸ್ಪಷ್ಟನೆ ಕೋರಿ ಆರ್‌ಬಿಐ ಅಧಿಕಾರಿಗಳ ವಿವರವನ್ನು ಸಿಬಿಐ ಕೇಳುತ್ತಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಆರ್ಥಿಕ ನೀತಿಗಳಿಗೆ ಸಂಬಂಧಿಸಿದಂತೆ ನಿಯಮಿತವಾಗಿ ಸಿಬಿಐ ವಿವರಣೆ ಯನ್ನು ಪಡೆಯುತ್ತಿದೆ. ಇದೇ ಪ್ರಕ್ರಿಯೆ ಅಡಿಯಲ್ಲಿ ಮಾಜಿ ಅಧಿಕಾರಿಗಳ ವಿವರಣೆಯನ್ನೂ ಪಡೆಯಲಾಗಿದೆ.
ಬ್ಯಾಂಕ್ ಹಗರಣಗಳ ಹಿನ್ನೆಲೆಯಲ್ಲಿ ಖಾಸಗಿ ಬ್ಯಾಂಕ್ ಸಿಇಒಗಳಿಗೆ ವರ್ಷಾಂತ್ಯದಲ್ಲಿ ನೀಡಬೇಕಿದ್ದ ಬೋನಸ್ ಗಳನ್ನು ಆರ್‌ಬಿಐ ತಡೆಹಿಡಿದಿದೆ. ಎಚ್‌ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸಿಇಒಗಳ ಬೋನಸ್ ಇನ್ನೂ ಬಿಡುಗಡೆಯಾಗಿಲ್ಲ. ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚಾರ್‌ಗೆ 2.2 ಕೋಟಿ ರೂ., ಆಕ್ಸಿಸ್ ಬ್ಯಾಂಕ್‌ನ ಸಿಇಒ ಶಿಖಾ ಶರ್ಮಾಗೆ 2.9 ಕೋಟಿ ರೂ. ಹಾಗೂ ಎಚ್‌ಡಿಎಫ್ಸಿ ಬ್ಯಾಂಕ್ ಸಿಇಒ ಆದಿತ್ಯ ಪುರಿಗೆ 2.9 ಕೋಟಿ ರೂ. ಬೋನಸ್ ನೀಡಲು ಆಡಳಿತ ಮಂಡಳಿಗಳು ಸಮ್ಮತಿಸಿದ್ದವು.